ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿಸುವ ಬೆಳೆಸುವ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯನ್ವಯ ಭಜನೆ- ಹರಿಸಂಕೀತನೆ- ಗಮಕ -ಹವ್ಯಾಸಿ ತಂಡಗಳ ಯಕ್ಷಗಾನ ತಾಳಮದ್ದಳೆ, ವಿದ್ಯಾರ್ಥಿ ಸಮಾಗಮ ಆ. 15ರಿಂದ 17ರ ವರೆಗೆ ಜರಗಲಿದೆ.
15 ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ನಾಡಿನ ವಿವಿಧ ಭಜನಾ ತಂಡಗಳ ಭಜನಾ ಕಾರ್ಯಕ್ರಮ ನಂತರ ಹರಿಸಂಕೀರ್ತನೆ ನಡೆಯಲಿದೆ. ಅದೇ ದಿನ ಕುಂದಾಪುರದ ಶ್ರೀ ನಾದೋಪಾಸನ ಸಮೂಹ, ಕೋಟೇಶ್ವರ ಇವರ ಪಾಲ್ಗೊಳ್ಳುವಿಕೆ ಮೆರಗು ನೀಡಲಿದೆ. ದಿನಾಂಕ 16 ಮತ್ತು 17 ರಂದು ಬೆಳಿಗ್ಗೆ 10ರಿಂದ ರಾತ್ರಿಯವರೆಗೆ ಹವ್ಯಾಸಿ ಯಕ್ಷಗಾನ ಕಲಾವಿದರ ಒಟ್ಟು 9 ತಂಡಗಳ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
16 ರಂದು ಮಧ್ಯಾಹ್ನ 12ಕ್ಕೆ ಶ್ರೀ ಧರ್ಮಸ್ಥಳ ಉಜಿರೆ ಮಂಜುನಾಥೇಶ್ವರ ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಕುರಿತಾದ ಉಪನ್ಯಾಸ, ಪ್ರಾತ್ಯಕ್ಷಿಕೆ, ಸಂವಾದ ನಡೆಯುವುದು. ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಪ್ರಾತ್ಯಕ್ಷಿಕೆ ನಡೆಸಿಕೊಡುವರು.17 ರಂದು ಮಧ್ಯಾಹ್ನ 2 ಗಂಟೆಗೆ ಗಮಕ ಶ್ರಾವಣ ಕಾರ್ಯಕ್ರಮ ವನ್ನು ಕರ್ನಾಟಕ ಗಮಕ ಪರಿಷತ್ತು ಬೆಂಗಳೂರು ಇದರ ಕೇರಳ ಗಡಿನಾಡ ಘಟಕ ಕಾಸರಗೋಡು ನಡೆಸಿಕೊಡಲಿದೆ.
ಕಾರ್ಯಕ್ರಮವನ್ನು 16ರಂದು ಬೆಳಗ್ಗೆ ಬ್ರಹ್ಮಶ್ರೀ ಗಣಾದಿರಾಜ ಉಪಾಧ್ಯಾಯ ಕೊಲ್ಲಂಗಾನ ಇವರು ದೀಪಪ್ರಜ್ವಲನೆ ಮೂಲಕ ಉಧ್ಘಾಟಿಸುವರು. ಹವ್ಯಾಸಿ ಯಕ್ಷಗಾನ ಕಲಾವಿದ ,ಸಂಘಟಕ ಗಣೇಶ್ ಭಟ್ ಬಾಯಾರು, ಪುಳ್ಕೂರು ಮಹಾದೇವ ದೇವಸ್ಥಾನ ದ ಆಡಳಿತ ಸಮಿತಿಯ ಅಧ್ಯಕ್ಷ ಶೀನ ಶೆಟ್ಟಿ ಕಜೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.. 17ರಂದು ಮದ್ಯಾಹ್ನ 2 ಗಂಟೆಗೆ ವಿಶೇಷವಾಗಿ ಗಮಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಮಾರೋಪ ಸಂಜೆ 4ಕ್ಕೆ ನಡೆಯಲಿದೆ. ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೋಕ್ಥೇಸರ ಕೆ ಜಿ. ಶ್ಯಾನುಭೋಗ್ ಅಧ್ಯಕ್ಷತೆ ವಹಿಸುವರು. ಮಂಗಳೂರಿನ ಹಿರಿಯ ವಕೀಲ, ಯಕ್ಷಗಾನ ಸಂಘಟಕ, ಕಲಾವಿದಸಂತೋಷ್ ಐತಾಳ್ ಹಾಗೂ ರವಿಶಂಕರ್ ಮಾನ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.





