ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಸಮಿತಿಯ ಮಹಾಸಭೆ ಆ. 17ರಂದು ಮಧ್ಯಾಹ್ನ 3ಕ್ಕೆ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ.
ಲೆಕ್ಕ ಪತ್ರ ಮಂಡನೆ, ಉಳಿಕೆ ಹಣದ ವಿನಿಯೋಗದ ವಿವರಣೆ ಹಾಗೂ ಬ್ರಹ್ಮಕಲಶ ಮೂಡಪ್ಪ ಸೇವಾ ಸಮಿತಿಯ ವಿಸರ್ಜನೆ ನಡೆಯಲಿರುವುದು. ಸಭೆಯಲ್ಲಿ ಬ್ರಹ್ಮಕಲಶ-ಮೂಡಪ್ಪ ಸೇವಾ ಸಮಿತಿ, ಎಲ್ಲಾ ಉಪಸಮಿತಿಗಳ, ಎಲ್ಲಾ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.



