ಟೆಹರಾನ್: ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಪರ ಗೂಢಚರ್ಯೆ ನಡೆಸಿದ ಆರೋಪದಲ್ಲಿ 20 ಮಂದಿಯನ್ನು ಈಚೆಗೆ ಬಂಧಿಸಲಾಗಿದೆ ಎಂದು ಇರಾನ್ ಶನಿವಾರ ತಿಳಿಸಿದೆ.
ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇರಾನ್‌ನ ಅಪರಾಧಿಗಳಿಗೆ ಮರಣದಂಡನೆ ವಿಧಿಸಿರುವುದು ಈ ವರ್ಷ ಹೆಚ್ಚಾಗಿದೆ.
ಈಚಿನ ತಿಂಗಳುಗಳಲ್ಲಿ ಕನಿಷ್ಠ ಎಂಟು ಜನರಿಗೆ ಮರಣದಂಡನೆ ವಿಧಿಸಿದೆ.
ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸಿದ ಹಾಗೂ ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕೊಲ್ಲಲ್ಪಟ್ಟ ಪರಮಾಣು ವಿಜ್ಞಾನಿಯ ಮಾಹಿತಿಯನ್ನು ಹಂಚಿಕೊಂಡಿದ್ದ ಅಪರಾಧದಡಿ ರೌಜ್ಬೆ ವಾಡಿ ಎಂಬ ಪರಮಾಣು ವಿಜ್ಞಾನಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಮಾಧ್ಯಮವೊಂದು ಬುಧವಾರ ವರದಿ ಮಾಡಿತ್ತು.




