ಬದಿಯಡ್ಕ: 54ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಆಗಸ್ಟ್ 26,27,28ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಆ.26 ರಂದು ಮಂಗಳವಾರ ಪೂರ್ವಾಹ್ನ 7.30ಕ್ಕೆ ಉಷಃಪೂಜೆ, ಗಣಪತಿ ಹೋಮ ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ ಇವರ ನೇತೃತ್ವದಲ್ಲಿ ನಡೆಯಲಿದೆ. ನಂತರ ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಆ.27 ರಂದು ಶ್ರೀ ಮಹಾಗಣಪತಿ ಪ್ರತಿಷ್ಠೆ, ಧ್ವಜಾರೋಹಣ, ರಾಷ್ಟ್ರಗೀತೆ, ಗಣಪತಿ ಹೋಮ, ಭಜನೆ. 10 ರಿಂದ ವಿವಿಧ ಸ್ಪರ್ಧೆಗಳು, 11.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸನಾತನ ಧರ್ಮ ಪಾಠಶಾಲೆಯ ಅಧ್ಯಾಪಕ, ಹಿಂದೂ ಐಕ್ಯವೇದಿ ರಾಜ್ಯ ಕಾರ್ಯದರ್ಶಿ ರಾಜೇಶ್ ನಾದಾಪುರ ಧಾರ್ಮಿಕ ಉಪನ್ಯಾಸ ನೀಡುವರು. 12.30ಕ್ಕೆ ಮಹಾಪೂಜೆ, 1.30 ರಿಂದ ಸಾಹಿತ್ಯ ಗಾನ ನೃತ್ಯ ವೈಭವ, 2.30 ರಿಂದ ಯಕ್ಷಗಾನ ಬಯಲಾಟ ಈರ್ವೆರ್ ಸತ್ಯೊಲು, ಸಂಜೆ 6ಕ್ಕೆ ದೀಪಾರಾಧನೆ, ಕೈಕೊಟ್ಟುಕಳಿ, 7 ರಿಂದ ಗಣೇಶಾರ್ಪಣಂ ಭರತನಾಟ್ಯ, 8.30ಕ್ಕೆ ಮಹಾಪೂಜೆ. ಆ.28 ರಂದು ಪೂರ್ವಾಹ್ನ 7ಕ್ಕೆ ಉಷಃಪೂಜೆ, ಭಜನೆ, ಮಧ್ಯಾಹ್ನ 12 ರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, 2.30 ರಿಂದ ಶ್ರೀ ದೇವರ ಭವ್ಯ ಶೋಭಾಯಾತ್ರೆ ಆರಂಭ, ರಾತ್ರಿ ಪೆರಡಾಲ ವರದಾ ನದಿಯಲ್ಲಿ ವಿಗ್ರಹ ವಿಸರ್ಜನೆ ನಡೆಯಲಿದೆ.
ಆ.27 ರಂದು ನಡೆಯುವ ಸ್ಪರ್ಧೆಗಳು :
ಯು.ಪಿ., ಹೈಸ್ಕೂಲ್, ಸಾರ್ವಜನಿಕ ವಿಭಾಗದಲ್ಲಿ ಪೆನ್ಸಿಲ್ ಡ್ರಾಯಿಂಗ್, ಹೈಸ್ಕೂಲ್ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಹೂಕಟ್ಟುವ ಸ್ಪರ್ಧೆ, ಯು.ಪಿ, ಹೈಸ್ಕೂಲ್, ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ (ವಿಷಯ ಅದೇದಿನ ಬೆಳಗ್ಗೆ 10.30ಕ್ಕೆ ನೀಡಲಾಗುವುದು) ನಡೆಯಲಿದೆ.

