ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಡಿಸೆಂಬರ್ 28ರಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಲ್ಲಿನ ಚುನಾವಣಾ ಆಯೋಗವು ಸೋಮವಾರ ಘೋಷಿಸಿದೆ.
2021ರಿಂದ ಮ್ಯಾನ್ಮಾರ್‌ದಲ್ಲಿನ ಆಡಳಿತವನ್ನು ಸೇನೆಯ ನಿಯಂತ್ರಣದಲ್ಲಿದೆ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಸೇನೆಯೇ ನೇಮಿಸಿದೆ.
ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ವೇಳಾಪಟ್ಟಿಯು ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.ಸೇನೆಯನ್ನು ಬೆಂಬಲಿಸುವ 'ಯುನಿಯನ್ ಸೋಲ್ಜರಿಟಿ ಆಯಂಡ್ ಡೆವಲಪ್‌ಮೆಂಟ್' ಪಕ್ಷ ಸೇರಿದಂತೆ ಸುಮಾರು 60 ಪಕ್ಷಗಳು ನೋಂದಾಯಿಸಿಕೊಂಡಿವೆ.
ಸೇನೆಯ ನೇತೃತ್ವದಲ್ಲಿ ಚುನಾವಣೆ ನಡೆಯುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಶಸ್ತ್ರಾಸ್ತ್ರಧಾರಿಗಳ ಸಂಘಟನೆಗಳು ಸೇರಿದಂತೆ ಹಲವು ವಿರೋಧಿ ಸಂಘಟನೆಗಳು ಚುನಾವಣೆಗೆ ಅಡ್ಡಿಪಡಿಸುವುದಾಗಿ ಹೇಳಿವೆ.




