ಕೊಚ್ಚಿ: ಪಾಸ್ ಪೋರ್ಟ್ ಸೇವೆಗಳ ಕಂಪನಿ ಬಿ.ಎಲ್.ಎಸ್. ಇಂಟನ್ರ್ಯಾಷನಲ್. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭದಲ್ಲಿ 49.8% ಹೆಚ್ಚಳವನ್ನು ವರದಿ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 120.8 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿತ್ತು, ಆದರೆ ಈ ತ್ರೈಮಾಸಿಕದಲ್ಲಿ ಅದು 181 ಕೋಟಿ ರೂ.ಏರಿಕೆಯಾಗಿದೆ.
ಜೂನ್ 30 ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಲಾಭವು 44.2% ರಷ್ಟು ಏರಿಕೆಯಾಗಿ 710.6 ಕೋಟಿ ರೂ.ಗಳಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು 492.7 ಕೋಟಿ ರೂ.ಗಳಾಗಿತ್ತು.
2025 ರ ಹಣಕಾಸು ವರ್ಷದಲ್ಲಿಯೂ ಸಹ ಬಿ.ಎಲ್.ಎಸ್. ಇಂಟನ್ರ್ಯಾಷನಲ್‍ನ ವಾರ್ಷಿಕ ಕಾರ್ಯಕ್ಷಮತೆ ಉತ್ತಮವಾಗಿತ್ತು. ಹೊಸ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಉತ್ತಮ ಕಾರ್ಯಕ್ಷಮತೆಯನ್ನು ಮುಂದುವರೆಸಿದೆ.
ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿನ ಕಾರ್ಯಕ್ಷಮತೆಯು ಕಂಪನಿಯ ವೈವಿಧ್ಯಮಯ ವ್ಯವಹಾರ ಮಾದರಿಯ ಯಶಸ್ಸಾಗಿದೆ ಎಂದು ಬಿ.ಎಲ್.ಎಸ್. ಇಂಟನ್ರ್ಯಾಷನಲ್ ಸರ್ವೀಸಸ್‍ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗರ್ವಾಲ್ ಹೇಳಿದ್ದಾರೆ. 2005 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಬಿಎಲ್‍ಎಸ್, 70 ಕ್ಕೂ ಹೆಚ್ಚು ದೇಶಗಳಲ್ಲಿ 46 ಸರ್ಕಾರಗಳೊಂದಿಗೆ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ.




