ಬದಿಯಡ್ಕ: 54ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಗುರುವಾರ ಸಂಜೆ ಬಿಟ್ಟು ಬಿಟ್ಟು ಬಂದ ಮಳೆಯ ಮಧ್ಯೆ ಶ್ರೀದೇವರ ವೈಭವದ ಶೋಭಾಯಾತ್ರೆ ನಡೆಯಿತು. ಪೇಟೆಯ ಎರಡೂ ಬದಿಯಲ್ಲಿ ಭಗವದ್ಭಕ್ತರು ಶ್ರೀದೇವರನ್ನು ಹಾಗೂ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದರು. ಸಿಂಗಾರಿಮೇಳದೊಂದಿಗೆ ವಯಲಿನ್, ಸಂಚಾರಿ ರಸಮಂಜರಿ, ಪಂಚವಾದ್ಯ, ಕುಣಿತ ಭಜನೆ, ನಾಸಿಕ್ ಬ್ಯಾಂಡ್, ತಾಳವಾದ್ಯ, ಚಿಟ್ಟೆಕುಣಿತ, ಡಿಜಿಟಲ್ ಡೋಲ್ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.
ಬದಿಯಡ್ಕ ಪೇಟೆಯನ್ನು ಸುತ್ತಿ ಪೆರಡಾಲ ಶ್ರೀಉದನೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುವ ವರದಾ ನದಿಯಲ್ಲಿ ವಿಗ್ರಹ ನಿಮಂಜನೆ ಮಾಡಲಾಯಿತು. ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ ಹಾಗೂ ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪೂಜಾದಿ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಊರಪರವೂರ ನೂರಾರು ಮಂದಿ ಭಗವದ್ಭಕ್ತರು ಪಾಲ್ಗೊಂಡಿದ್ದರು.




.jpg)
