ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ವ್ಯವಸ್ಥಾಪಕರಾದ ಕೆ.ಎನ್ ಕೃಷ್ಣ ಭಟ್ ಧ್ವಜಾರೋಹಣಗೈದರು. ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರರ ವೇಷ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ವಿಷ್ಣು ಪ್ರಕಾಶ್ ಪೆರ್ವ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಕೆ.ಎನ್ ಕೃಷ್ಣ ಭಟ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾತಂತ್ರ್ಯದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕ ಉಷಾಂತ್ ಕಿಳಿಂಗಾರು ಶುಭ ಹಾರೈಸಿದರು.
ಕಿಳಿಂಗಾರು ಶಾಲಾ ನಿವೃತ್ತ ಶಿಕ್ಷಕಿ ಶಾರದಾ ಭಟ್, ಕಿಳಿಂಗಾರು ಎಜುಕೇಶನ್ ಕಮಿಟಿಯ ಸದಸ್ಯ ಶಿವಪ್ರಸಾದ್, ಸ್ಥಳೀಯ ಯುವಕೇಸರಿ ಕಿಳಿಂಗಾರು ಕ್ಲಬ್ ನ ಕಾರ್ಯದರ್ಶಿ ಮನೋಜ್ ಹಾಗೂ ಮಾತೃ ಸಂಘದ ಅಧ್ಯಕ್ಷೆ ದಿವ್ಯಲಕ್ಷ್ಮಿ ನಿಡುಗಳ ಶುಭಾಶಂಸನೆಗೈದರು. ಮಕ್ಕಳಿಂದ ದೇಶಭಕ್ತಿಯನ್ನು ಸಾರುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ವೇಷಧರಿಸಿದ ಪುಟಾಣಿಗಳಿಗೆ ಶಾಲಾ ವ್ಯವಸ್ಥಾಪಕ ಕೆ.ಎನ್.ಕೃಷ್ಣಭಟ್ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಿದರು. ಹಳೆ ವಿದ್ಯಾರ್ಥಿಗಳು ಶಾಲೆಗೆ ಕಲಿಕಾ ಕಿಟ್ ನೀಡಿದರು. ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ.ಸ್ವಾಗತಿಸಿ, ಶಿಕ್ಷಕಿ ಮಧುಮತಿ ಕಂಬಾರ್ ವಂದಿಸಿದರು. ಅಧ್ಯಾಪಕರಾದ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಶಾಲಾ ಸಹನಾ ಕಾರ್ಯಕ್ರಮ ನಿರೂಪಿಸಿದರು. ಆಧ್ಯಾಪಿಕೆಯರಾದ ಅನುರಾಧ, ತೇಜಸ್ವಿ, ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




.jpg)
.jpg)
