ನವದೆಹಲಿ: ದೇಶದಾದ್ಯಂತ ಪಿಂಚಣಿದಾರರು (Pension) ಕಾಯುತ್ತಿದ್ದ ಕ್ಷಣ ಬಂದಿದೆ. ನೌಕರರ (Employee) ಭವಿಷ್ಯ ನಿಧಿ ಸಂಸ್ಥೆ (EPFO) ಕಾಲಕಾಲಕ್ಕೆ ಕೆಲವೊಂದು ಉತ್ತಮ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈಗ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
ಪಿಂಚಣಿಯನ್ನು 7,500 ರೂಪಾಯಿಗಳಿಗೆ ಹೆಚ್ಚಿಸಿದೆ. ಇದರ ಪರಿಣಾಮ ಸುಮಾರು 78 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಇಪಿಎಫ್‌ಒ ಕನಿಷ್ಠ ಪಿಂಚಣಿ ಮಿತಿಯನ್ನು 7,500 ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದೆ. ಇದರ ಪರಿಣಾಮ ಹಣದುಬ್ಬರವನ್ನು ಎದುರಿಸಲು ಸ್ವಲ್ಪ ಆರ್ಥಿಕ ಪರಿಹಾರ ಸಿಗಲಿದೆ.
ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರವು ದೇಶದಾದ್ಯಂತ 78 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಪಿಂಚಣಿ ಹೆಚ್ಚಳವು ಏಪ್ರಿಲ್ 2025ರಿಂದ ಅನ್ವಯವಾಗುತ್ತದೆ. ಅದೇ ರೀತಿ ಹೊಸ ಡಿಎ ಸಹ ಲಭ್ಯವಿರುತ್ತದೆ.
ಕನಿಷ್ಠ ಪಿಂಚಣಿ ₹1000 ಆಗಿರುವುದರಿಂದ, ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ಬಹಳ ಸಮಯದಿಂದ ಟೀಕೆಗಳು ಕೇಳಿಬರುತ್ತಿತ್ತು. ಈಗ ಕನಿಷ್ಠ ಪಿಂಚಣಿ 7,500 ರೂಪಾಯಿಗೆ ಏರಿಕೆ ಆಗಿದೆ. ಇದರ ಪರಿಣಾಮ ಆರೋಗ್ಯ, ಆಹಾರ ಮತ್ತು ಮನೆಯ ವೆಚ್ಚಗಳಿಗೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ. ಪಿಂಚಣಿದಾರರು ಸದ್ಯ ಪಿಂಚಣಿಗಿಂತ 7 ಪಟ್ಟು ಹೆಚ್ಚಾಗಿರುವುದರಿಂದ ಅಪಾರ ಪ್ರಯೋಜನ ಪಡೆಯುತ್ತಾರೆ.
EPFO ಪಿಂಚಣಿದಾರರು AICPI ಸೂಚ್ಯಂಕದ ಪ್ರಕಾರ DA ಪಡೆಯುತ್ತಾರೆ. DA ಸದ್ಯ ಶೇಕಡಾ 7 ರಷ್ಟಿದೆ. EPS 95ರ ಪ್ರಕಾರ ನಿವೃತ್ತರಾದ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ. ಹತ್ತು ವರ್ಷಗಳ ಸೇವೆಯನ್ನು ಹೊಂದಿರುವವರು ಇದಕ್ಕೆ EPSಗೆ ಅರ್ಹರು. ಹೆಚ್ಚಿದ ಪಿಂಚಣಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇದನ್ನು ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುತ್ತದೆ. ಯಾವುದೇ ತೊಂದರೆ ತಪ್ಪಿಸಲು KYC ಯನ್ನು ಅಪ್‌ಡೇಟ್ ಮಾಡಬೇಕು.
ಹೊಸ ಪಿಎಫ್ ಪಿಂಚಣಿ ಯೋಜನೆಯ ಪ್ರಕಾರ, ಪಿಂಚಣಿ 1000 ರೂಪಾಯಿಗಳಿಂದ 7,500 ರೂಪಾಯಿಗಳಿಗೆ ಏರಿಕೆಯಾಗಲಿದೆ. ಶೇ 7 ರಷ್ಟು ಡಿಎ ಸೇರಿಸಿದರೆ ಹೆಚ್ಚುವರಿಯಾಗಿ 525 ರೂಪಾಯಿ ಸಿಗಲಿವೆ. ಒಟ್ಟಾರೆ ಕನಿಷ್ಠ ಪಿಂಚಣಿ 1000 ರೂಪಾಯಿಗಳಿಂದ 8,025 ರೂಪಾಯಿಗಳಿಗೆ ಏರಿಕೆಯಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಇಪಿಎಫ್ ಬಡ್ಡಿ ದರ ಬದಲಾವಣೆಗಳಲ್ಲಿ ಹಲವು ಬದಲಾವಣೆ ಆಗಿವೆ. 2023-24 : 8.25% (ಸ್ವಲ್ಪ ಹೆಚ್ಚಳ) 2022-23: 8.15% (ಸ್ವಲ್ಪ ಇಳಿಕೆ) 2021-22 : 8.10% (40 ವರ್ಷಗಳಲ್ಲಿ ಅತ್ಯಂತ ಕಡಿಮೆ ಆಗಿತ್ತು) 2020-21 : 8.50% (ಉತ್ತಮ ಹೆಚ್ಚಳ ಎಂದು ಹೇಳಲಾಗಿತ್ತು) 1977-78 : 8% (ಇದುವರೆಗಿನ ಅತ್ಯಂತ ಕಡಿಮೆ ದರ).
ಇಪಿಎಫ್‌ನಲ್ಲಿ ಗಳಿಸುವ ಬಡ್ಡಿಯು ಇತರ ಅನೇಕ ಸ್ಥಿರ-ಆದಾಯದ ಆಯ್ಕೆಗಳಿಗಿಂತ ಹೆಚ್ಚಾಗಿರುತ್ತದೆ ಮತ್ತು ಸ್ಥಿರವಾಗಿರುತ್ತದೆ. ಇದು ನಿವೃತ್ತಿ ಬದುಕಿಗಾಗಿ ಹೆಚ್ಚಿನ ಪ್ರಮಾಣದ ಹಣ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ಹಣಕಾಸು ಸಚಿವಾಲಯದ ಈ ನಿರ್ಧಾರವು ದೇಶಾದ್ಯಂತ ಕೋಟ್ಯಂತರ ಉದ್ಯೋಗಿಗಳಿಗೆ ಪರಿಹಾರ ನೀಡಿದೆ.




