ಕಾಸರಗೋಡು: ಪ್ರವಾಸೋದ್ಯಮ ಇಲಾಖೆ ಆಯೋಜಿಸುವ ಓಣಂ ಆಚರಣೆಯ ಅಂಗವಾಗಿ, ವಿವಿಧ ಕಲಾಪ್ರಕಾರಗಳನ್ನೊಳಗೊಂಡ ಮೆರವಣಿಗೆ ಸೆಪ್ಟೆಂಬರ್ 9ರಂದು ತಿರುವನಂತಪುರದಲ್ಲಿ ನಡೆಯಲಿದೆ. ಪ್ರಸಕ್ತ ಮೆರವಣಿಗೆಯಲ್ಲಿ ಕೇರಳದ ಸಾಂಸ್ಕøತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಲು ಆಸಕ್ತಿ ಹೊಂದಿರುವ ಕಲಾವಿದರಿಂದ ಅಥವಾ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವರವಾದ ಮಾಹಿತಿಯೊಂದಿಗೆ ಅರ್ಜಿಗಳನ್ನು ಆಗಸ್ಟ್ 22ರೊಳಗೆ ಪ್ರವಾಸೋದ್ಯಮ ಇಲಾಖೆಯ ಓಣಂ ಮೆರವಣಿಗೆಯ ಸಾಮಾನ್ಯ ಸಂಚಾಲಕರಿಗೆ ಸಲ್ಲಿಸಬೇಕು. ಪಾರ್ಕ್ ವ್ಯೂ, ತಿರುವನಂತಪುರಂ - 33 ಅಥವಾ ಸದಸ್ಯ ಕಾರ್ಯದರ್ಶಿ, ಭಾರತ್ ಭವನ, ತೃಪ್ತಿ ಬಂಗಲೆ, ತೈಕಾಡ್. Pತಿರುವನಂತಪುರಂ - 14 ಎಎಂಬ ವಿಳಾಸಕ್ಕೆ ಕಳುಹಿಸಿಕೊಡಬೇಖು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣೀ ಸಂಖೆಯ(0471 4000282)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




