ಕುಂಬಳೆ: ಸೀತಾಂಗೋಳಿಯಲ್ಲಿ ನಡೆದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ ಕಾಸರಗೋಡಿನ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಆಶ್ರಯದಲ್ಲಿ ವಿಶೇಷ ಪ್ರತಿಭೆ ರೆಮೋನಾ ಎವೇಟ್ಟೇ ಪೆರೇರಾ ಅವರನ್ನು ನಾಟ್ಯ ಮಯೂರಿ ಎಂಬ ಬಿರುದು ನೀಡಿ ಗೌರವಿಸಿ, ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೆಮೋನಾ ಅವರ ಮಾತೃಶ್ರೀ ಮಿಸ್ ಗ್ಲಾಡೀಸ್ ಪೆರೇರಾ ಅವರಿಗೂ ಕೂಡಾ ಮಾತೃ ಪ್ರೇರಕ ಶಕ್ತಿ ಅನ್ನುವ ನೆಲೆಯಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು.
ರೆಮೋನಾ ಅವರನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೀತಾoಗೋಳಿ ಇದರ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಗಣೇಶ್ ಪ್ರಸಾದ್ ಆಳ್ವ, ಕೋಶಾಧಿಕಾರಿ ಶೈಲಜಾ ಕೆ, ಕಾರ್ಯದರ್ಶಿ ಗುರುರಾಜ್ ಕಾಸರಗೋಡು, ಜೊತೆ ಕಾರ್ಯದರ್ಶಿ ವರ್ಷಾ ಶೆಟ್ಟಿ, ಧಾರ್ಮಿಕ ಮುಂದಾಳು ಅಪ್ಪಣ್ಣ ಸೀತಾಂಗೋಳಿ, ಸೀತಾಂಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸೀತಾಂಗೋಳಿಯ ಶ್ರೀದೇವಿ ಭಜನಾ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.




.jpg)
