HEALTH TIPS

ಫ್ಯಾಕ್ಟ್ ಚೆಕ್: ಅಂಚೆ ಇಲಾಖೆಯ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್ ಆಗಲಿದೆಯೇ?

ಬೆಂಗಳೂರು: ಅಂಚೆ ಇಲಾಖೆಯ ಜನಪ್ರಿಯ ನೋಂದಾಯಿತ ಅಂಚೆ (ರಿಜಿಸ್ಟರ್ಡ್ ಪೋಸ್ಟ್) ಸೇವೆಯನ್ನು ಇದೇ ವರ್ಷ 2025 ಸೆಪ್ಟೆಂಬರ್ 1ರಿಂದ ನಿಲ್ಲಿಸಲಾಗುತ್ತದೆ ಎಂದು ಕೆಲ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗಿತ್ತು.

ಆದರೆ, ಈ ಬಗ್ಗೆ ಇಂಡಿಯಾ ಪೋಸ್ಟ್ ಸ್ಪಷ್ಟನೆ ನೀಡಿದ್ದು, ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸಲಾಗುತ್ತದೆ ಎಂಬುದು ಸುಳ್ಳು ಸುದ್ದಿ ಎಂದು ತಿಳಿಸಿದೆ.

ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸುತ್ತಿಲ್ಲ, ಅದನ್ನು ಸ್ಪೀಡ್ ಪೋಸ್ಟ್ ಜೊತೆ ಬೆಸೆಯಲಾಗುತ್ತಿದೆ. ಹೊಸ ತಂತ್ರಜ್ಞಾನಗಳ ಸಹಕಾರದಿಂದ ಎರಡೂ ಸೇವೆಗಳು ಇನ್ನಷ್ಟು ಉತ್ತಮವಾಗಿ ಗ್ರಾಹಕರಿಗೆ ಸಿಗಲಿವೆ ಎಂದು ಹೇಳಿದೆ.

ನಿರ್ದಿಷ್ಟ ವ್ಯಕ್ತಿಗೆ ಅಂಚೆ ವಿತರಣೆ, ರಶೀದಿ, ರಿಯಲ್ ಟೈಮ್ ಟ್ರ್ಯಾಕಿಂಗ್, ಅಂಚೆಯ ಕಾನೂನು ಸಿಂಧುತ್ವ ಮತ್ತು ಸ್ವೀಕೃತಿಗಳು ಇನ್ಮುಂದೆ ಎರಡಕ್ಕೂ ಒಂದೇ ಆಗಿರುತ್ತವೆ ಎಂದು ವಿವರಿಸಿದೆ.

ಇನ್ಮುಂದೆ ಸ್ಪೀಡ್ ಪೋಸ್ಟ್ ಸಮಯದ ವಿಶ್ವಾಸರ್ಹತೆಯಂತೆ ರಿಜಿಸ್ಟರ್ಡ್ ಪೋಸ್ಟ್ ಸೇವೆಯೂ ಇರುತ್ತದೆ ಎಂದು ತಿಳಿಸಿದೆ.

'ನಾವು ಅಳಿಯುತ್ತಿಲ್ಲ, ಆಧುನಿಕತೆ ಅಳವಡಿಸಿಕೊಂಡು ಬೆಳೆಯುತ್ತಿದ್ದೇವೆ' ಎಂದು ಸುಳ್ಳು ಸುದ್ದಿಗಳಿಗೆ ಇಂಡಿಯಾ ಪೋಸ್ಟ್ ಕೌಂಟರ್ ಕೊಟ್ಟಿದೆ.

ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಭಾರತದಲ್ಲಿ 1975 ರಲ್ಲಿ ಆರಂಭಿಸಲಾಗಿತ್ತು. ಗೌಪ್ಯತೆ ದೃಷ್ಟಿಯಿಂದ ನಿರ್ಧಿಷ್ಟ ವ್ಯಕ್ತಿಗೆ ಮಾತ್ರ ಅಂಚೆಯನ್ನು ತಲುಪಿಸುವುದನ್ನು ರಿಜಿಸ್ಟರ್ಡ್ ಪೋಸ್ಟ್ ಸೇವೆ ಎನ್ನಲಾಗುತ್ತದೆ. ಒಂದು ಅಂಚೆ ವೇಗವಾಗಿ ತಲುಪಬೇಕು ಎನ್ನುವ ದೃಷ್ಟಿಯಿಂದ ಸ್ಪೀಡ್ ಪೋಸ್ಟ್ ಸೇವೆ ಜಾರಿಗೆ ತರಲಾಗಿದೆ. ಸ್ಪೀಡ್ ಪೋಸ್ಟ್ ಅನ್ನು ಅಂಚೆಗೆ ಸಂಬಂಧಿಸಿದ ವ್ಯಕ್ತಿಗಳು ಯಾರು ಬೇಕಾದರೂ ಸಹಿ ಮಾಡಿ ಸ್ವೀಕರಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries