ಜೆರುಸಲೇಂ ಹಮಾಸ್‌ಅನ್ನು ನಿಶ್ಯಸ್ತ್ರಗೊಳಿಸಲು ಮತ್ತು ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ಗಾಜಾ ನಗರವನ್ನು ಇಸ್ರೇಲ್ ಮಿಲಿಟರಿ ಸ್ವಾಧೀನಪಡಿಸುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಯೋಜನೆಯನ್ನು ಇಸ್ರೇಲ್‌ನ ಭದ್ರತಾ ಸಚಿವ ಇಸ್ರೇಲ್ ಅನುಮೋದಿಸಿದೆ.
ಗಾಜಾದಲ್ಲಿ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು ಮತ್ತು ಕಳೆದ 22 ತಿಂಗಳುಗಳಿಂದ ಹಮಾಸ್ ಸೆರೆಯಲ್ಲಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ತಕ್ಷಣ ಹಿಂದಿರುಗಿಸಬೇಕೆಂದು ಒತ್ತಾಯಿಸಿ ಇಸ್ರೇಲ್‌ನಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಹಮಾಸ್ ವಿರುದ್ಧ ಯುದ್ಧ ಕೊನೆಗೊಳಿಸಲು ಇಸ್ರೇನ್ ಪ್ರಧಾನಿ ಕಚೇರಿಯು ಐದು ಯೋಜನಗಳನ್ನು ರೂಪಿಸಿತ್ತು ಅವುಗಳೆಂದರೆ,
ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದು
ಎಲ್ಲಾ ಒತ್ತೆಯಾಳುಗಳನ್ನು ಹಿಂದಿರುಗಿಸುವುದು
ಗಾಜಾದ ಸಶಸ್ತ್ರೀಕರಣ
ಗಾಜಾದಲ್ಲಿ ಇಸ್ರೇಲಿ ಭದ್ರತಾ ನಿಯಂತ್ರಣ
ಹಮಾಸ್ ಅಥವಾ ಪ್ಯಾಲೆಸ್ಟೀನಿಯನ್ ಪ್ರಾಧಿಕಾರವಲ್ಲದ ನಾಗರಿಕ ಆಡಳಿತವನ್ನು ಸ್ಥಾಪಿಸುವುದು.
ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಯುದ್ಧ ವಲಯಗಳ ಹೊರಗಿನ ನಾಗರಿಕರಿಗೆ ಮಾನವೀಯ ನೆರವು ವಿತರಿಸುವುದರ ಜತೆಗೆ ಗಾಜಾ ನಗರದ ನಿಯಂತ್ರಣವನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿವೆ ಎಂದು ನೆತನ್ಯಾಹು ಕಚೇರಿ ತಿಳಿಸಿದೆ.




