HEALTH TIPS

ಆಲಪ್ಪುಳ: ಮೃತದೇಹದ ಇನ್ನಷ್ಟು ಅವಶೇಷ ಪತ್ತೆ

ತಿರುವನಂತಪುರಂ: ಕೇರಳದ ಆಲಪ್ಪುಳ ಜಿಲ್ಲೆಯ ಮನೆಯೊಂದರಲ್ಲಿ ಮಾನವನ ಮೃತದೇಹದ ಇನ್ನಷ್ಟು ಅವಶೇಷಗಳು ಪತ್ತೆಯಾಗಿದ್ದು, ಸರಣಿ ಹತ್ಯೆ ನಡೆದಿರುವ ಅನುಮಾನಗಳಿಗೆ ಪುಷ್ಟಿ ನೀಡಿದೆ.

ಕೊಲೆ ಪ್ರಕರಣದ ಆರೋಪಿ, ಆಲಪ್ಪುಳದ ಪಳ್ಳಿಪುರಂನ ಸೆಬಾಸ್ಟಿಯನ್‌ನ ಮನೆಯ ಆವರಣದಲ್ಲಿ ಸೋಮವಾರ ಮೃತದೇಹದ 20 ಭಾಗಗಳು ದೊರೆತಿವೆ.

ಪೊಲೀಸರು ಶ್ವಾನಗಳನ್ನು ಬಳಸಿ ಮನೆಯ ವಿಶಾಲ ಆವರಣದಲ್ಲಿ ವ್ಯಾಪಕ ಶೋಧ ನಡೆಸಿದರು. ಮನೆಯ ನೆಲವನ್ನೂ ಅಗೆದು ಶೋಧ ನಡೆಸಿದ್ದಾರೆ.

ಪೊಲೀಸರು ಈ ವೇಳೆ ಸೆಬಾಸ್ಟಿಯನ್‌ನನ್ನೂ ಸ್ಥಳಕ್ಕೆ ಕರೆತಂದಿದ್ದರು. ಕೊಲೆಯಾದ ಮಹಿಳೆಯ ಪರಿಚಯ ತನಗೆ ಇತ್ತು ಎಂದು ಸೆಬಾಸ್ಟಿಯನ್‌ ಒಪ್ಪಿಕೊಂಡಿದ್ದಾನೆ. ಆದರೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

2024ರ ಡಿಸೆಂಬರ್‌ನಲ್ಲಿ ಕೊಟ್ಟಾಯಂ ಜಿಲ್ಲೆಯ ಎಟ್ಟುಮಾನೂರಿನ ಜೆಯ್‌ನಮ್ಮ ಎಂಬವರ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸೆಬಾಸ್ಟಿಯನ್‌ನನ್ನು ಬಂಧಿಸಿದ್ದರು. ಹಲವಾರು ವರ್ಷಗಳ ಹಿಂದೆ ಇಬ್ಬರು ಮಹಿಳೆಯರ ನಾಪತ್ತೆ ಪ್ರಕರಣ ಮತ್ತು ಆಲಪ್ಪುಳದ ಮತ್ತೊಬ್ಬ ಮಹಿಳೆಯ ನಾಪತ್ತೆಯಲ್ಲೂ ಆತನ ಪಾತ್ರ ಇದೆ ಎಂದು ಶಂಕಿಸಲಾಗಿದೆ.

ಸರಣಿ ಹತ್ಯೆಯಲ್ಲಿ ಆತ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮನೆಯಿಂದ ವಶಪಡಿಸಿಕೊಂಡ ಅವಶೇಷಗಳ ಡಿಎನ್‌ಎ ಪರೀಕ್ಷೆಯ ಫಲಿತಾಂಶಗಳು ನಿರ್ಣಾಯಕವಾಗುತ್ತವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries