HEALTH TIPS

ರಾಷ್ಟ್ರೀಯ ಬಾಹ್ಯಾಕಾಶ ದಿನ | ಅಂತರಿಕ್ಷದ ರಹಸ್ಯ ಭೇದಿಸಲು ಸಜ್ಜಾಗಿ: ಮೋದಿ

ನವದೆಹಲಿ: ಮಾನವತೆಯ ಭವಿಷ್ಯವನ್ನು ಉಜ್ವಲಗೊಳಿಸುವಂಥ ಅಂತರಿಕ್ಷ ರಹಸ್ಯಗಳನ್ನು ಭೇದಿಸುವ ಬಾಹ್ಯಾಕಾಶದ ಆಳ ಅಧ್ಯಯನ ಯೋಜನೆಗಳನ್ನು ಸಾಕಾರಗೊಳಿಸಲು ಸನ್ನದ್ದರಾಗುವಂತೆ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ವಿಡಿಯೊ ಮೂಲಕ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, 'ಭವಿಷ್ಯದ ಯೋಜನೆಗಳಿಗಾಗಿ ಗಗನಯಾತ್ರಿಗಳನ್ನು ಬಹು ಸಂಖ್ಯೆಯಲ್ಲಿ ಹೊಂದಲು ಭಾರತ ಉದ್ದೇಶಿಸಿದೆ.

ದೇಶದ ಯುವಜನರು ಕೂಡ ಗಗನಯಾನಿಗಳ ಈ ಗುಂಪಿನಲ್ಲಿ ಸೇರಬೇಕು' ಎಂದಿದ್ದಾರೆ.

ಅಲ್ಲದೇ, 'ನಾವು ಈಗಾಗಲೇ ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಕಾಲಿಟ್ಟಿದ್ದೇವೆ. ಬಾಹ್ಯಾಕಾಶದ ಆಳಕ್ಕೂ ಇಣುಕಬೇಕಿದೆ. ಅಲ್ಲಿರುವ ಹಲವು ರಹಸ್ಯಗಳು ಮಾನವತೆಯ ಭವಿಷ್ಯವನ್ನು ಉಜ್ವಲಗೊಳಿಸಲಿವೆ' ಎಂದಿದ್ದಾರೆ.

ವಿಜ್ಞಾನಿಗಳನ್ನು ಪ್ರಶಂಸಿಸಿರುವ ಪ್ರಧಾನಿ, 'ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದರ ಹಿಂದೆ ಮತ್ತೊಂದರಂತೆ ಮೈಲಿಗಲ್ಲುಗಳನ್ನು ಸ್ಥಾಪಿಸುವುದು ಭಾರತ ಹಾಗೂ ಭಾರತೀಯ ವಿಜ್ಞಾನಿಗಳ ಗುಣಲಕ್ಷಣವಾಗಿ ಹೋಗಿದೆ. ತಾರಾಗಣದ ಆಚೆಗೂ ದಿಗಂತದ ವ್ಯಾಪ್ತಿ ಇದೆ. ಅಂತ್ಯವೇ ಇಲ್ಲದ ವಿಶ್ವವು ಯಾವುದೇ ಮೊದಲ ಗಡಿಯು ಅಂತಿಮ ಗಡಿಯಲ್ಲ ಎಂಬುದನ್ನು ಸಾರುತ್ತಿದೆ. ಬಾಹ್ಯಾಕಾಶ ವಲಯದಲ್ಲೂ ಅಂತಿಮ ಗಡಿ ಇರಬಾರದು' ಎಂದು ಪ್ರತಿಪಾದಿಸಿದ್ದಾರೆ.

ಇದೇ ವೇಳೆ, ವಿಜ್ಷಾನ ಕ್ಷೇತ್ರದಲ್ಲಿ ಖಾಸಗಿ ಪಾಲುದಾರರೂ ಕೈ ಜೋಡಿಸುವಂತೆ ಕರೆ ನೀಡಿರುವ ಪ್ರಧಾನಿ, ವರ್ಷಂಪ್ರತಿ 50 ರಾಕೆಟ್‌ಗಳನ್ನು ಉಡಾವಣೆ ಮಾಡುವ ಹಂತಕ್ಕೆ ನಾವು ತಲುಪಬಹುದೇ? ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬಹುದೇ ಎಂದು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಕೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries