ಕಾಸರಗೋಡು: ಕಾಸರಗೋಡು ಜಿಲ್ಲೆಯ ಮೊದಲ ತೀವ್ರ ಬಡತನ ಮುಕ್ತ ನಗರಸಭೆಯಾಗಿ ಕಾಂಞಂಗಾಡು ನಗರಸಭೆಯನ್ನು ಘೋಷಿಸಲಾಗಿದೆ. ನಗರಸಭೆಯ ಟೌನ್ ಹಾಲ್‍ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತ ಈ ಘೋಷಣೆ ಮಾಡಿದರು.
ಮನೆ ಮತ್ತು ಭೂಮಿ ಇಲ್ಲದೆ ವಾಸಿಸುತ್ತಿರುವ ಐದು ಕುಟುಂಬಗಳಿಗೆ ಭೂಮಿಯೊದಗಿಸಿ, ಭೂದಾಖಲೆ ಹಸ್ತಾಂತರಿಸಲಾಗಿದೆ ಎಂಬುದು ಯೋಜನೆಯ ಪ್ರಮುಖ ಸಾಧನೆಯಾಗಿದೆ. ಕುಟುಂಬಗಳ ಒಟ್ಟಾರೆ ಉನ್ನತಿಗಾಗಿ ಮನೆಗಳ ದುರಸ್ತಿ, ಮಕ್ಕಳಿಗೆ ಅಧ್ಯಯನ ಕೊಠಡಿಗಳು, ಶಾಲಾ ಕಿಟ್‍ಗಳು, ಔಷಧಿಗಳಿಗೆ ಸಹಾಯ ಮತ್ತು ಆಹಾರ ಕಿಟ್‍ಗಳಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.
ನಗರಸಭೆ ಉಪಾಧ್ಯಕ್ಷ ಬಿಂಟೆಕ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಕೆ.ವಿ. ಸರಸ್ವತಿ, ಕೆ.ಅನೀಸ್ನ್, ಕೆ. ಪ್ರಭಾವತಿ, ನಗರಸಭೆ ಕಾರ್ಯದರ್ಶಿ ಎಂ.ಕೆ.ಶಿಬು, ನಗರಸಭೆ ಅಭಿಯಂತ ಚಂದ್ರನ್ ಕಿಝಕ್ಕೆವೀಡು, ಕಂದಾಯ ಅಧೀಕ್ಷಕ ರಾಮಚಂದ್ರನ್ ಮತ್ತು ಕ್ಲೀನ್ ಸಿಟಿ ವ್ಯವಸ್ಥಾಪಕ ಬೈಜು ಮಾತನಾಡಿದರು.




.jpeg)
