HEALTH TIPS

ಉತ್ತರಕಾಶಿ ಮೇಘಸ್ಫೋಟ: ಮಣ್ಣಿನಡಿಯಿಂದ ತೆವಳಿಕೊಂಡು ಬಂದು ಸಾವಿನ ದವಡೆಯಿಂದ ಪಾರಾದ!

ಉತ್ತರಕಾಶಿ: ಉತ್ತರಕಾಶಿಯ ಧರೇಲಿ ಗ್ರಾಮದ ಗಂಗೋತ್ರಿ ಮಾರ್ಗದಲ್ಲಿ ಸಂಭವಿಸಿರುವ ಭೀಕರ ಮೇಘಸ್ಫೋಟದಲ್ಲಿ, ಗ್ರಾಮದಲ್ಲಿನ ಮನೆಗಳು, ಮರ- ಗಿಡಗಳು, ಕಾರುಗಳು ಕೊಚ್ಚಿಕೊಂಡು ಹೋಗಿವೆ. 

ದುರಂತದಲ್ಲಿ 60-70 ಜನ ನಾಪತ್ತೆಯಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಐವರು ಮೃತಪಟ್ಟಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಮೇಘಸ್ಫೋಟದ ಭೀಕರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈ ವಿಡಿಯೊಗಳಲ್ಲಿ 'ದಿ ಸಂಡೇ ಗಾರ್ಡಿಯನ್‌' ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೊದಲ್ಲಿ ಕೆಸರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬರು ಜೀವ ಕೈಯಲ್ಲಿ ಹಿಡಿದುಕೊಂಡು ಹೊರಕ್ಕೆ ಬರುತ್ತಿರುವ ದೃಶ್ಯ ಸೆರೆಯಾಗಿದೆ.

ಎದೆ ಝಲ್‌ ಎನ್ನಿಸುವ ಈ ವಿಡಿಯೊದಲ್ಲಿ, ನೀರಿನಿಂದ ಕೂಡಿರುವ ಮಣ್ಣಿನರಾಶಿಯಲ್ಲಿ ತೆವಳುತ್ತಾ ವ್ಯಕ್ತಿಯೊಬ್ಬರು ಹೊರಬಂದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸಾವು ಸಮೀಪದಲ್ಲಿರುವಾಗ ಬದುಕಲೇ ಬೇಕನ್ನುವ ಕೊನೆ ಕ್ಷಣದ ಪ್ರಯತ್ನ ಎಂಬಂತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಈ ಮೇಘಸ್ಫೋಟದಲ್ಲಿ ಹರಿದುಬಂದ ಅಪಾರ ಪ್ರಮಾಣದ ಕೆಸರು ಮಣ್ಣಿನಲ್ಲಿ ಅರ್ಧ ಗ್ರಾಮವೇ ಹೂತುಹೋಗಿರುವ ಸಾಧ್ಯತೆಯಿದ್ದು, ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries