ಉಪ್ಪಳ: ಪೈವಳಿಕೆ ಚಿಪ್ಪಾರ್ ಸಮೀಪದ ಕಡೆಂಕೋಡಿಯ ಕರಾವಳಿ ಫ್ರೆಂಡ್ ಕ್ಲಬ್ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಧ್ವಜ ಸ್ಥಂಭದ ಉದ್ಘಾಟನೆಗೈದು ರಾಷ್ಟ್ರ ಧ್ವಜಾರೋಹಣವನ್ನು ಸತ್ಯಶಂಕರ ಭಟ್ ಮಳಿವು ನೆರವೇರಿಸಿದರು. ಕ್ಲಬ್ ನ ಅಧ್ಯಕ್ಷ ರಾಮಚಂದ್ರ ನಾಯ್ಕ್ ಅಧ್ಯಕ್ಷತೆ ವಹಿದ್ದರು. ನಾರಾಯಣ ಬೆಳ್ಚಪ್ಪಾಡ ಅಡ್ಕತ್ತಿಮಾರ್, ಶೀನ ಮೂಲ್ಯ ಕಡೆಂಕೋಡಿ, ಅಲಿ ಕಡೆಂಕೋಡಿ, ಹರೀಶ್ ಶೆಟ್ಟಿಗಾರ್ ಕೊಮ್ಮಂಗಳ, ಶಾಮಸುಂದರ ಭಟ್ ಕಡೆಂಕೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಹರಿಣಕುಮಾರ್ ಸ್ವಾಗತಿಸಿ, ವಂದಿಸಿದರು. ಸಂದೀಪ್ ನಾಯ್ಕ್ ಕಡೆಂಕೋಡಿ ಕಾರ್ಯಕ್ರಮ ನಿರೂಪಿಸಿದರು.




.jpg)
