ಕಾಸರಗೋಡು: ರಾಜ್ಯ ಲೈಬ್ರರಿ ಕೌನ್ಸಿಲ್ ಮಾಜಿ ಸದಸ್ಯರಾಗಿ, ಕೆ.ಎಸ್.ಟಿ.ಎ. ರಾಜ್ಯ ಸಮಿತಿ ಸದಸ್ಯರಾಗಿ, ಸೇವಾ ಪಿಂಚಣಿದಾರರ ಸಂಘದ ರಾಜ್ಯ ನಾಯಕರಾಗಿ, ತುಳು ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ ದಿ. ಎಸ್ ನಾರಾಯಣ ಭಟ್ ಅವರನ್ನು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ವತಿಯಿಂದ ಸಂಸ್ಕರಣೆ ನಡೆಯಿತು.
ಕಾಸರಗೋಡು ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಸ್ಮರಣಾಂಜಲಿ ಕಾರ್ಯಕ್ರಮವನ್ನು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ದಿವಂಗತರ ಭಾವಚಿತ್ರ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ವಕೀಲ. ಪಿ. ಅಪ್ಪುಕುಟ್ಟನ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ.ಕೆ ಪನೆಯಾಲ್ ಸಂಸ್ಮರಣಾ ಭಾಷಣ ಮಾಡಿದರು. ಎ.ಕೆ. ಶಶಿಧರನ್, ಪಿ.ಕೆ. ಅಹಮ್ಮದ್ ಹುಸೇನ್, ಎ.ಕರುಣಾಕರನ್, ದಾಸಪ್ಪ ಶೆಟ್ಟಿ, ಶೇಖರ ಶಟ್ಟಿ ಬಾಯಾರ್, ಪಿ.ದಾಮೋದರನ್, ರಾಘವನ್ ವಲಿಯವೀಡ್, ಡಿ.ಕಮಲಾಕ್ಷ, ವಿ.ಅಬ್ದುಲ್ಲ, ಶ್ರೀಕುಮಾರಿ ಟೀಚರ್ ಮತ್ತಿತರರು ಮಾತನಾಡಿದರು.ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಪಿ.ದಿಲೀಪ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ವಂದಿಸಿದರು.

.jpg)
