ಬದಿಯಡ್ಕ: ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ವಾರ್ಡ್ ಪ್ರತಿನಿಧಿಗಳ ಶನಿವಾರ ನಡೆದ ಸಮಾವೇಶವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲತ್ ಉದ್ಘಾಟಿಸಿದರು. ಬಿಜೆಪಿ ಪಂಚಾಯಿತಿ ಸಮಿತಿ ಉಪಾಧ್ಯಕ್ಷೆ ಯಶೋದಾ ಎನ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡಕ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಪಂಚಾಯಿತಿ ಪ್ರಭಾರಿ ಶ್ರೀಧರ ಬೆಳ್ಳೂರು, ನೇತಾರರಾದ ನಳಿನಿ ಕೃಷ್ಣ ಮಲ್ಲಮೂಲೆ, ರವೀಂದ್ರ ರೈ ಗೊಸಾಡ, ಹರೀಶ್ ಗೋಸಾಡ, ಜಯಪ್ರಕಾಶ್ ಶೆಟ್ಟಿ, ಪ್ರಮೋದ್ ಭಂಡಾರಿ, ಜನ ಪ್ರತಿನಿಧಿಗಳು, ವಾರ್ಡ್ ಪ್ರತಿನಿಧಿಗಳು ಭಾಗವಹಿಸಿದ್ದರು.




.jpg)
