ಕಾಸರಗೋಡು
: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಆ. 2ರಂದು ಕಿಸಾನ್ ಸಮ್ಮಾನ್ ನಿಧಿಯ 20 ನೇ ಕಂತನ್ನು ಬಿಡುಗಡೆ ಮಾಡಲಿದ್ದು, ಐಸಿಎಆರ್-ಸಿಪಿಸಿಆರ್ ಐ ಜಂಟಿಯಾಗಿ ಕಾಸರಗೋಡಿನ ಕೆವಿಕೆ ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಇದನ್ನು 'ಪಿಎಂ ಕಿಸಾನ್ ಉತ್ಸವ ದಿವಸ್' ಎಂದು ಆಚರಿಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ, ಸಿಪಿಸಿಆರ್‍ಐ ಸಭಾಂಗಣದಲ್ಲಿ ಕೃಷಿಕರ ನೋಂದಣಿ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ. ಈ ಸಂದರ್ಭ 'ಕಾಸರಗೋಡು ಜಿಲ್ಲೆಯಲ್ಲಿ ಸಾವಯವ ಕೃಷಿಯ ಸಾಧ್ಯತೆಗಳ' ಕುರಿತು ರೈತರ ಸಂವಾದ ಕಾರ್ಯಕ್ರಮ, ತರಬೇತಿ ಮತ್ತು ತಂತ್ರಜ್ಞಾನದ ಪ್ರಾತ್ಯಕ್ಷಿಕೆಗಳನ್ನು ಕಾಸರಗೋಡು ಸಿಪಿಸಿಆರ್ ಐ ಮುಖ್ಯ ಕ್ಯಾಂಪಸ್‍ನಲ್ಲಿ ನಡೆಸಲಾಗುವುದು. ಐಸಿಎಆರ್-ಸಿಪಿಸಿಆರ್ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರ ನಡೆಯಲಿರುವುದು. ಎಲ್ಲಾ ರೈತರು ಮತ್ತು ಆಸಕ್ತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಕಾರ್ಯಕ್ರಮ ಆಯೋಜಕರಾದ ಸಿಪಿಸಿಆರ್‍ಐನ ಸಾಮಾಜಿಕ ವಿಭಾಗದ ಮುಖ್ಯಸ್ಥ ಡಾ. ಪೆÇನ್ನುಸಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರೈತರನ್ನುದ್ದೇಶಿಸಿ ಮಾಡಿದ ಭಾಷಣದ ನೇರ ಪ್ರಸಾರ, ಉತ್ತರ ಪ್ರದೇಶದ ಸಚಿವರ ಸಂವಾದ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಕೆವಿಕೆ ಫಲಾನುಭವಿ ರೈತರೊಂದಿಗೆ ಆನ್‍ಲೈನ್ ಸಂವಾದವೂ ಒಳಗೊಂಡಿದೆ.




