ಮಂಜೇಶ್ವರ: ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುವ ಶ್ರೀ ವೆಂಕಟೇಶ ವೈಭವ ಹಾಗೂ ಶ್ರೀ ವೈಷ್ಣವಿ ಸದನದ ಲೋಕಾರ್ಪಣೆಯ ಪ್ರಯುಕ್ತ ಅಗಸ್ಟ್ 18ರಂದು ರಾತ್ರಿ 9ರಿಂದ ದಿನೇಶ್ ಕೋಡಪದವು ಸಂಯೋಜನೆಯಲ್ಲಿ 'ಚಂದ್ರಾವಳಿ ವಿಳಾಸ'ಯಕ್ಷಗಾನ ಬಯಲಾಟ ಜರಗಲಿದೆ.
ಭಾಗವತರಾಗಿ ಧೀರಜ್ ರೈ ಸಂಪಾಜೆ, ಚೆಂಡೆ ರೋಹಿತ್ ಉಚ್ಚಿಲ, ಕಲಾವಿದರಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿನೇಶ್ ಕೋಡಪದವು, ದಿನೇಶ್ ರೈ ಕಡಬ, ರಕ್ಷಿತ್ ಶೆಟ್ಟಿ ಪಡ್ರೆ, ರಾಜೇಶ್ ನಿಟ್ಟೆ ಪ್ರಜ್ವಲ್ ಕುಮಾರ್, ಸುಂದರ್ ರೈ ಮಂದಾರ ಅಭಿನಯಿಸಲಿದ್ದಾರೆ.




