ಕಾಸರಗೋಡು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದ್ದು, ವಿವಿಧೆಡೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜನಸಂದಣಿಯಿರುವ ಪ್ರದೇಶ, ವಸತಿ ಸಮುಚ್ಛಯ, ಕೇಂದ್ರ-ರಾಜ್ಯ ಸರ್ಕಾರಿ ಕಚೇರಿ ಪ್ರದೇಶದಲ್ಲೂ ಕಾರ್ಯಾಚರಣೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರ ಪ್ರಮುಖ ರಸ್ತೆಗಳಲ್ಲಿ ವಾಹನ ತಪಾಸಣೆ ಬಿಗಿಗೊಳಿಸಲಾಘಿದೆ. ಇನ್ನು ಸಮುದ್ರದಲ್ಲಿ ಕನ್ಗಾವಲು ಚುರುಕುಗೊಳಿಸಲಾಗುತ್ತಿದೆ. ಸಮುದ್ರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬರುವ ದೋಣಿಗಳು, ಯಾಂತ್ರೀಕೃತ ಬೋಟುಗಳ ಮೇಲೂ ನಿಗಾಯಿರಿಸಲಾಗುತ್ತಿದೆ. ವಿಶೇಷವಾಗಿ ರೈಲ್ವೆ ನಿಲ್ದಾಣಗಳಿಗೆ ಆಘಮಿಸುವ ಲಗ್ಗೇಜ್‍ಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ. ವಸತಿಗೃಹಗಳಲ್ಲಿ ಕೊಠಡಿ ಪಡೆದು ವಾಸ್ತವ್ಯವಿರುವವರನ್ನು ತನಿಖೆಗೊಳಪಡಿಸಲಾಗುತ್ತಿದೆ. ಜಿಲ್ಲಾಡಳಿತ ವತಿಯಿಂದ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಇಂಧನ ಖಾತೆ ಸಚಿವ ಕೃಷ್ಣನ್ ಕುಟ್ಟಿ ಧ್ವಜಾರೋಹಣ ನಡೆಸುವರು.




