ಕಾಸರಗೋಡು: ನಗರಸಭಾ ಸಿಡಿಎಸ್ ನೇತೃತ್ವದಲ್ಲಿ ಹದಿನೆಂಟನೇ ವಾರ್ಡಿನ ಅಮೈ ಬಯಲಿನಲ್ಲಿ ಭತ್ತದ ಬೇಸಾಯ'ಮಳೆ ಹಬ್ಬ'ಕಾರ್ಯಕ್ರಮ ಆಯೋಜಿಸಲಾಯಿತು. ಹೊಸ ಪೀಳಿಗೆಯನ್ನು ಕೃಷಿ ಕ್ಷೇತ್ರದತ್ತ ಆಕರ್ಷಿಸುವ ನಿಟ್ಟಿನಲ್ಲಿ ಭತ್ತದ ನಾಟಿಯೊಂದಿಗೆ ವಿವಿಧ ಕಲೆ ಮತ್ತು ಕ್ರೀಡೆಗಳನ್ನು ಆಯೋಜಿಸಲಾಗಿತ್ತು,
ಅಮೈ ಬಯಲಿನ ಸುಮಾರು 3 ಎಕರೆ ಜಮೀನಿನಲ್ಲಿ ಭತ್ತದ ಬೇಸಾಯ ನಡೆಸುವ ಕಾರ್ಯಕ್ರಮ ಊರಿಗೆ ಹಬ್ಬದ ವಾತಾವರಣ ತಂದುಕೊಟ್ಟಿತ್ತು. ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಆಯೇಷಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಗರಸಭಾ ಉಪಾಧ್ಯಕ್ಷೆ ಶಂಶೀದಾ ಫಿರೋಜ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಹೀರ್ ಆಸಿಫ್ ಮತ್ತು ಖಾಲಿದ್ ಪಚ್ಚಕ್ಕಾಡ್, ವಾರ್ಡ್ ಕೌನ್ಸಿಲರ್ ವಿಮಲಾ ಶ್ರೀಧರ್, ನಗರಸಭಾ ಕಾರ್ಯದರ್ಶಿ ಅಬ್ದುಲ್ ಜಲೀಲ್, ಕೃಷಿ ಸಹಾಯಕರು ಉಪಸ್ಥಿತರಿದ್ದರು.
ಅಧಿಕಾರಿಗಳಾದ ಉಣ್ಣಿಕೃಷ್ಣನ್, ಜಯಚಂದ್ರನ್, ಜಿಲ್ಲಾ ಮಿಷನ್ ಬ್ಲಾಕ್ ಸಂಯೋಜಕರಾದ ಪಿ.ಪಿ. ಅನುಶ್ರೀ, ಎಂ.ವಿ. ಭವ್ಯ, ಸಿಡಿಎಸ್ ಸಂಚಾಲಕಿ ದೇವಯಾನಿ, ಲೆಕ್ಕಾಧಿಕಾರಿ ಪ್ರಿಯಾಮಣಿ, ಸಿಒ ಅರ್ಚನಾ, ಸಿಡಿಎಸ್ ಸದಸ್ಯರು, ಕುಟುಂಬಶ್ರೀ ಕಾರ್ಯಕರ್ತರು, ಬಾಲಸಭಾ ಮಕ್ಕಳು ಮತ್ತು ಸ್ಥಳೀಯರು ಭಾಗವಹಿಸಿದ್ದರು. ಸಿಡಿಎಸ್ ಸಂಚಾಲಕಿ ಶಾಹಿದಾ ಯೂಸುಫ್ ಸ್ವಾಗತಿಸಿದರು. ಸಂಚಾಲಕಿ ಆಶಾ ವಂದಿಸಿದರು. ಜನಪ್ರತಿನಿಧಿಗಳು, ಕುಟುಂಬಶ್ರೀ ಕಾರ್ಯಕರ್ತರು, ಮಕ್ಕಳು ಹಾಗೂ ಸಾರ್ವಜನಿಕರು ಗದ್ದೆಗೆ ಇಳಿದು ನೇಜಿ ನೆಡುವ ಮೂಲಕ ಸಂಭ್ರಮಿಸಿದರು.




