HEALTH TIPS

ಪ್ರಶ್ನೆಗಳಿಗೆ ಉತ್ತರಿಸಲು ಕೃತಕ ಬುದ್ಧಿಮತ್ತೆಗೆ ನೀರೇ ಆಹಾರ! ಭೀಕರ ಜಲಕ್ಷಾಮದತ್ತ ಜಗತ್ತು...

ಈಗಂತೂ ಕೃತಕ ಬುದ್ಧಿಮತ್ತೆ (Artificial Intelligence) ಎನ್ನುವುದು ಸರ್ವೇ ಸಾಮಾನ್ಯ ಆಗಿ ಹೋಗಿದೆ. ಕೆಲವರಂತೂ ಇದನ್ನು ಹುಚ್ಚಾಪಟ್ಟೆ ಬಳಸುತ್ತಿದ್ದಾರೆ. ಅನಗತ್ಯ ಕಾರಣಗಳಿಗೂ ಈಗ ಎಐ ಮೊರೆ ಹೋಗುವುದು ಸಾಮಾನ್ಯವಾಗಿದೆ. ಬೇಕಿರಲಿ, ಬೇಡದೇ ಇರಲಿ ಎಐ ಬಳಸಿ ಉತ್ತರ ಕಂಡುಕೊಳ್ಳುವುದು ಚಟವಾಗಿ ಮಾರ್ಪಟ್ಟಿದೆ.

ಇನ್ನು ದೊಡ್ಡ ಮಟ್ಟದಲ್ಲಿಯೂ ಎಐ ಬಳಕೆ ಹೆಚ್ಚಾಗುತ್ತಿದೆ. ಬಹುತೇಕ ಕಂಪೆನಿಗಳಲ್ಲಿ ಉದ್ಯೋಗಿಗಳ ಬದಲು ಎಐನೇ ವ್ಯಾಪಿಸಿಕೊಂಡಿದೆ. ಆದರೆ ನಿಮಗೆ ಗೊತ್ತಾ? ಎಲ್ಲರೂ ಈ ರೀತಿಯಾಗಿ ಎರ್ರಾಬಿರ್ರಿಯಾಗಿ ಬಳಸುತ್ತಾ ಹೋದರೆ ಶೀಘ್ರವೇ ಇಡೀ ವಿಶ್ವ ಕಂಡು ಅರಿಯದಂಥ ಭೀಕರ ಜಲಕ್ಷಾಮ ಎದುರಿಸಬೇಕಾಗುತ್ತದೆ, ಈಗಲೇ ಹಲವು ಕಡೆಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದ್ದು, ಎಐ ಬಳಕೆಯಿಂದಾಗಿ ಅದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂದೊಂದು ದಿನ ನೀರಿಗಾಗಿಯೇ ಜಾಗತಿಕ ಯುದ್ಧ ನಡೆಯಲಿದೆ ಎನ್ನುವ ಕಾಲಜ್ಞಾನಿಗಳ ಮಾತು ಕೂಡ ಇದೇ ಕಾರಣಕ್ಕೆ ನಿಜವಾಗಲಿದೆ ಎನ್ನಿಸಲಿದೆ.

ಹಾಗಿದ್ದರೆ ಎಐಗೂ ನೀರಿಗೂ ಎತ್ತಣತ್ತ ಸಂಬಂಧವಯ್ಯಾ ಎಂದು ಪ್ರಶ್ನಿಸಬಹುದು. ಮನುಷ್ಯನನ್ನೇ ತೆಗೆದುಕೊಳ್ಳಿ. ನಮಗೆ ತುಸು ಒತ್ತಡ ಹೆಚ್ಚಾದರೆ ತಲೆಯೆಲ್ಲಾ ಬಿಸಿಬಿಸಿಯಾಗುತ್ತದಲ್ಲ, ಹಾಗೆಯೇ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಎಐಗೆ ಕೇಳಿದಾಗ ಆ ಯಂತ್ರದ ಉಷ್ಣ ಏರುತ್ತಾ ಸಾಗುತ್ತದೆ. ನಾವು ಕೇಳುವ ಪ್ರಶ್ನೆಗಳಿಗೆ ನಮ್ಮ ಮೊಬೈಲ್​ ಉತ್ತರ ಕೊಡುತ್ತದೆ ಎಂದು ನಾವಂದುಕೊಂಡಿರುತ್ತೇವೆ. ಆದರೆ ಆ ಪ್ರಶ್ನೆಗಳೆಲ್ಲವೂ ಒಂದೆಡೆ ಇರುವ ಸರ್ವರ್​ಗಳಲ್ಲಿ ದಾಖಲಾಗಿ, ಅಲ್ಲಿಂದ ನಮಗೆ ಉತ್ತರ ಬರುತ್ತದೆ. ಅಲ್ಲಿ ಹೆಚ್ಚು ಹೆಚ್ಚು ಒತ್ತಡ ಹಾಕಿದಾಗ, ಉಷ್ಣ ಹೆಚ್ಚುತ್ತದೆ. ಇದನ್ನು ತಂಪು ಮಾಡುವುದಕ್ಕಾಗಿ ನೀರನ್ನು ಬಳಕೆ ಮಾಡಲಾಗುತ್ತಿದೆ.

ಡಾಟಾ ಕೇಂದ್ರ ಕಾರ್ಯನಿರ್ಹಹಿಸಬೇಕಾದಲ್ಲಿ ಅದನ್ನು ಸದಾ ಕಾಲ ತಂಪಾಗಿಡುವುದು ಅವಶ್ಯಕತೆ ಇರುತ್ತದೆ. ಆದ್ದರಿಂದ ಅವುಗಳಿಗೆ ಕೂಲಿಂಗ್​ ಸಿಸ್ಟಮ್ ಅವಳವಡಿಕೆ ಮಾಡಲಾಗುತ್ತದೆ. ಇದನ್ನು ತಂಪು ಮಾಡುವ ಪ್ರಕ್ರಿಯೆಗೆ ಶುದ್ಧ ನೀರಿನ ಅವಶ್ಯಕತೆ ಇದೆ. ಕೂಲಿಂಗ್ ಟವರ್ ಸಹಾಯದಿಂದ ಅಥವಾ ಕೂಲಿಂಗ್ ಸಿಸ್ಟಮ್​ನಿಂದ ನೀರು ಸದಾಕಾಲ ಸರ್ಕ್ಯೂಲೆಟ್​ ಆಗುತ್ತಲೇ ಇರಬೇಕು. ಇದರಿಂದಾಗಿ ಸರ್ವರ್​ನಲ್ಲಿ ಸೃಷ್ಟಿಯಾಗುವ ಹೀಟ್​ ಕಡಿಮೆಯಾಗುತ್ತದೆ.ಇದೇ ಕಾರಣಕ್ಕಾಗಿಯೇ ಹಲವು ಉಷ್ಣ ವಿದ್ಯುತ್ ಸ್ಥಾವರಗಳುಗಳನ್ನು ಅತಿಯಾದ ನೀರನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ಒಂದು ಬೆಳವಣಿಗೆ ಎಐ ಜಲಸಂಪನ್ಮೂಲಕ್ಕೆ ಮಾತ್ರ ದೊಡ್ಡ ಒತ್ತಡವಾಗುವುದರ ಜೊತೆಗೆ ಹವಾಮಾನ ಬದಲಾವಣೆಗೂ ಕೂಡ ಕಾರಣವಾಗಲಿದೆ ಎಂದು ಪರಿಣಿತರು ಆತಂಕವ್ಯಕ್ತಪಡಿಸಿದ್ದಾರೆ. ಇದಾಗಲೇ ಟೆಕ್ಸಾಸ್‌ನ ಕೃತಕ ಬುದ್ಧಿಮತ್ತೆ ಕೇಂದ್ರಗಳು 463 ಮಿಲಿಯನ್ ಗ್ಯಾಲನ್‌ಗಳನ್ನು ಹೀರಿವೆ. ಹೀಗೆ ಹಲವಾರು ಕೇಂದ್ರಗಳು ಇದೇ ರೀತಿ ನೀರನ್ನು ಕುಡಿಯುತ್ತಿದ್ದರೆ, ಯಾವ ಮಟ್ಟಿಗೆ ನೀರಿನ ಬಳಕೆ ಆಗುತ್ತದೆ ಎನ್ನುವುದನ್ನು ಗಮನಿಸಬಹುದು. ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಇದರ ಬಗ್ಗೆ ಇದಾಗಲೇ ಜನರು ಎಚ್ಚೆತ್ತುಕೊಂಡು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.

ಒಂದು ವೇಳೆ ಎಐ ತಂತ್ರಜ್ಞಾನ ನಿರಂತರವಾಗಿ ಅದರ ವೇಗವನ್ನು ಹೆಚ್ಚಿಸಲು ಬಳಿಸಿದಲ್ಲಿ. ಭವಿಷ್ಯದ ದಿನಗಳಲ್ಲಿ ಜಲಕ್ಷಾಮ ಎಂಬುದು ಗಂಭೀರ ಮಟ್ಟದಲ್ಲಿ ಎದುರಿಸಬೇಕಾದ ಸಂದರ್ಭ ಬರುತ್ತದೆ. ಅದರಲ್ಲೂ ಪ್ರಮುಖವಾಗಿ ಎಲ್ಲಿ ನೀರಿನ ಅಭಾವ ಇದೆಯೋ ಅಲ್ಲಿ ಎಐಗಳ ಡಾಟಾ ಕೇಂದ್ರಗಲು ಸ್ಥಾಪನೆಯಾದಲ್ಲಿ ಅಲ್ಲಿ ಭೀಕರ ಜಲಕ್ಷಾಮ ಉಂಟಾಗುವ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿವೆ. ಇದಾಗಲೇ ತಜ್ಞರು ಹೇಳಿರುವ ಪ್ರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಮುಂದೆ ಜಾಗತಿಕವಾಗಿ ನೀರಿನ ಅಭಾವ ಸೃಷ್ಟಿಯಾಗಲಿದೆ. ಅದು ಕೂಡ ಇನ್ನೂ ಕೆಲವೇ ವರ್ಷಗಳಲ್ಲಿ ಎಂದು ಹೇಳುತ್ತಿದ್ದಾರೆ. ಅದರಲ್ಲಿ ಎರ್ರಾಬಿರ್ರಿ ಎಲ್ಲದಕ್ಕೂ ಎಐ ಬಳಸುವ ನಾವು ಕೂಡ ಇಂಥ ಜಲಕ್ಷಾಮಕ್ಕೆ ಕೊಡುಗೆ ನೀಡುತ್ತಿದ್ದೇವೆ ಎನ್ನೋದೂ ನೆನಪಿನಲ್ಲಿ ಇರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries