ತಿರುವನಂತಪುರಂ: ಭೂ ನೋಂದಣಿ ಕಾಯ್ದೆಯನ್ನು ರೂಪಿಸುವ ಕೆಲಸವು ಈ ವರೆಗೆ ತುಂಬಾ ಕಠಿಣವಾಗಿತ್ತು ಎಂದು ಕಂದಾಯ ಸಚಿವ ಕೆ. ರಾಜನ್ ಹೇಳಿದರು.
ಸುದೀರ್ಘ ಕಾನೂನು ಪರಿಶೀಲನೆಗಳನ್ನು ನಡೆಸಿದ ನಂತರ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಮತ್ತು ಗುಡ್ಡಗಾಡು ಪ್ರದೇಶದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ತಿದ್ದುಪಡಿಯಲ್ಲಿ ಕೇವಲ 13 ನಿಯಮಗಳಿವೆ ಮತ್ತು 11 ನಿಯಮಗಳನ್ನು ಸಕ್ರಮಗೊಳಿಸಬಹುದು ಎಂದು ಅವರು ಹೇಳಿದರು. ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಭೂ ನೋಂದಣಿ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ಅವರು ತಿಳಿಸಿರುವರು.
ಹಕ್ಕುಪತ್ರದಲ್ಲಿ ಉಲ್ಲೇಖಿಸಲಾದ ನಿಬಂಧನೆಗಳನ್ನು ಉಲ್ಲಂಘಿಸಿದ ಸಂದರ್ಭಗಳಲ್ಲಿ ಮಾತ್ರ ಭೂ ನೋಂದಣಿ ಕಾಯ್ದೆಗೆ ತಿದ್ದುಪಡಿಯನ್ನು ಮಾನ್ಯಗೊಳಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ತಿದ್ದುಪಡಿಯು ಸರಳವಾದ ಕಾರ್ಯವಿಧಾನವನ್ನು ಪ್ರಸ್ತಾಪಿಸಿದೆ.
ಓಣಂ ರಜಾದಿನಗಳು ಮುಗಿದ ತಕ್ಷಣ ಉಳಿದ ಹಂತಗಳನ್ನು ಪೂರ್ಣಗೊಳಿಸಲಾಗುತ್ತದೆ. ಮುಚ್ಚಿದ ಕ್ವಾರಿಗಳನ್ನು ಕಾನೂನುಬದ್ಧಗೊಳಿಸಲಾಗುತ್ತದೆ. ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಗಳಿಂದ ಮುಚ್ಚಲ್ಪಟ್ಟ ಕ್ವಾರಿಗಳಿಗೆ ಇದು ಅನ್ವಯಿಸುವುದಿಲ್ಲ.
ಈಗಾಗಲೇ ಭೂ ದಾಖಲೆ(ಪಟ್ಟೆ) ಪಡೆದವರಿಗೆ ವಾಣಿಜ್ಯ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು. ಇದನ್ನು ಕಡಿಮೆ ಸಮಯದಲ್ಲಿ ಜಾರಿಗೆ ತರಬಹುದು ಎಂದು ಅವರು ಹೇಳಿದರು.
ಪೂರಂ ಗದ್ದಲ ವಿವಾದಕ್ಕೂ ಸಚಿವರು ಪ್ರತಿಕ್ರಿಯಿಸಿದರು. ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ವಿರುದ್ಧ ತಮ್ಮ ಅಭಿಪ್ರಾಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಮತ್ತು ಈ ಹಿಂದೆ ಹೇಳಿದ್ದಕ್ಕೆ ಬದ್ಧರಾಗಿರುವುದಾಗಿ ಅವರು ಹೇಳಿದರು. ಈ ಬಗ್ಗೆ ತನಿಖಾ ಅಧಿಕಾರಿಗಳಿಗೆ ಅವರು ಹೇಳಿಕೆ ನೀಡಿದ್ದಾರೆ. ಯಾವುದೇ ವರದಿ ಬಂದಿರುವುದು ಅವರಿಗೆ ತಿಳಿದಿಲ್ಲ ಎಮದರು.
ತನಿಖಾ ವರದಿ ಬರುವವರೆಗೆ ಕಾಯುವುದಾಗಿ ಹೇಳಿದ ಸಚಿವರು, ಈಗ ಊಹಾಪೆÇೀಹಗಳಿಗೆ ಪ್ರತಿಕ್ರಿಯಿಸಿದರೆ, ವರದಿ ಬಂದಾಗ ಉತ್ತರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.




