ಬದಿಯಡ್ಕ: ಎಡನೀರು ಶ್ರೀಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಮೀಯಪದವು ಶ್ರೀ ಗುರುನರಸಿಂಹ ಯಕ್ಷ ಬಳಗ ತಂಡದಿಂದ ಯಕ್ಷಗಾನ ತಾಳಮದ್ದಳೆ 'ಅಭಿಮನ್ಯು ಕಾಳಗ' ಸೇವಾ ರೂಪದಲ್ಲಿ ಪ್ರಸ್ತುತಿಗೊಂಡಿತು.
ಕವಿ ದೇವಿದಾಸ ವಿರಚಿತ ಅಭಿಮನ್ಯು ಕಾಳಗ ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತ ರಾಮಪ್ರಸಾದ್ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಲವಕುಮಾರ್ ಐಲ,ವಿಕ್ರಂ ಮಯ್ಯ ಪೈವಳಿಕೆ ಭಾಗವಹಿಸಿದ್ದು, ಪಾತ್ರವರ್ಗದಲ್ಲಿ ನಾ.ಕಾರಂತ ಪೆರಾಜೆ, ರಾಜಾರಾಮ್ ರಾವ್ ಮೀಯಪದವು, ಯೋಗೀಶ್ ರಾವ್ ಚಿಗುರುಪಾದೆ, ಹರಿನಾರಾಯಣ ಮಯ್ಯ ಬಜೆ, ಗುರುರಾಜ ಹೊಳ್ಳ ಬಾಯಾರು, ಅವಿನಾಶ ಹೊಳ್ಳ ವರ್ಕಾಡಿ, ಶಿವರಾಮ ಪ್ರಸಾದ್ ಮಯ್ಯ ಇಚ್ಲಂಗೋಡು ಪಾತ್ರವರ್ಗದಲ್ಲಿ ಸಹಕರಿಸಿದರು.




.jpg)
