ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ. 15ರಂದು ದೇವಾಲಯ ವಠಾರದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಮೊಸರುಕುಡಿಕೆ, ಶ್ರೀಕೃಷ್ಣ ವೇಷ ಸ್ಪರ್ಧೆ, ಕುಣಿತ ಭಜನೆ, ಯಕ್ಷನಾಟ್ಯ ವೈಭವ ಜರುಗಲಿದೆ.
ಈ ಸಂದರ್ಭ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳು ನಡೆಯುವುದು. ಮಧ್ಯಾಹ್ನ 2ರಿಂದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯುವುದು. ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಇಡಿಯಡ್ಕ ಶ್ರೀ ವಿಷ್ಣುಮೂರ್ತಿ ಯುವಕ ಸಂಘದ ಅಧ್ಯಕ್ಷ ಹರ್ಷತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ದೇವಾಲಯದ ಪ್ರಧಾನ ಕಾರ್ಯದರ್ಶಿ ಸದಾನಂಂದ ಶೆಟ್ಟಿ ಕುದ್ವ ಪ್ರಾಸ್ತಾವಿಕ ಮಾತುಗಳನ್ನಾಡುವರು. ರಾಜಾರಾಮ ಎಸ್. ಪೆರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾತ್ರಿ 8ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಅಮೃತಾ ಅಡಿಗ ಅವರ ಭಾಗವತಿಕೆಯಲ್ಲಿ 'ರಾಧಾ ವಿಲಾಸ'ಯಕ್ಷ, ನಾಟ್ಯ, ಗಾನ ವೈಭವ ನಡೆಯಲಿರುವುದು.




