ಭುವನೇಶ್ವರ: ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಬೇಕೆಂದು ಕೆಲವು ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ತಿಳಿಸಿದ್ದಾರೆ.
ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಅನಧಿಕೃತವಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಹರಿಚಂದನ್ ಪ್ರತಿಕ್ರಿಯಿಸಿದ್ದಾರೆ.
1990ರ ಕಾಶ್ಮೀರಿ ಪಂಡಿತ್ ಮಹಿಳೆ ಹತ್ಯೆ ಕೇಸ್: ಕಾಶ್ಮೀರದಲ್ಲಿ ಎಸ್‌ಐಎ ದಾಳಿ'ಕೂಲಿ' ಚಿತ್ರಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಿ ಜಗನ್ನಾಥ ದೇವಾಲಯದ ಪ್ರಸಾದವನ್ನು ಆನ್‌ಲೈನ್ ವೇದಿಕೆ ಮೂಲಕ ಭಕ್ತರಿಗೆ ತಲುಪಿಸುವಂತೆ ಕೆಲವು ಸಂಸ್ಥೆಗಳು ಇತ್ತೀಚೆಗೆ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿಗೆ (ಎಸ್‌ಜೆಟಿಎ) ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ತಿಳಿಸಿದ್ದವು.
ವಿಶ್ವದಾದ್ಯಂತ ಭಕ್ತರಿಗೆ ಪ್ರಸಾದವನ್ನು ಒದಗಿಸುವುದು ಒಳ್ಳೆಯದೇ ಆಗಿದ್ದರೂ, ಆನ್‌ಲೈನ್ ಮಾರಾಟದ ಮೂಲಕ ಪ್ರಸಾದದ ಪಾವಿತ್ರ್ಯತೆಯನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಮತ್ತು ಎಸ್‌ಜೆಟಿಎ ಅಭಿಪ್ರಾಯಪಟ್ಟಿರುವುದಾಗಿ ಹರಿಚಂದನ್ ಹೇಳಿದ್ದಾರೆ.
ಭಕ್ತರು ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಮಹಾಪ್ರಸಾದ ಸೇವಿಸುವಂತೆ ಹರಿಚಂದನ್ ಮನವಿ ಮಾಡಿದ್ದಾರೆ.
ಮಹಾಪ್ರಸಾದದ ಪರಿಷ್ಕೃತ ದರ ಪಟ್ಟಿಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.




