ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
78 ವರ್ಷದ ಬಿಜೆಡಿ ಮುಖ್ಯಸ್ಥ ಪಟ್ನಾಯಕ್ ಅವರು ಶನಿವಾರ ರಾತ್ರಿ ಅಸ್ವಸ್ಥರಾಗಿದ್ದರು.
ಕೂಡಲೇ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದರು ಎಂದು ಪಕ್ಷದ ನಾಯಕ ನವೀನ್ ನಿವಾಸ್ ತಿಳಿಸಿದ್ದಾರೆ.
ಪಟ್ನಾಯಕ್ ಅವರ ಆರೋಗ್ಯ ಕುರಿತು ಆಸ್ಪತ್ರೆ ಶೀಘ್ರದಲ್ಲೇ ಬುಲೆಟಿನ್ ಬಿಡುಗಡೆ ಮಾಡಲಿದೆ ಎಂದು ಬಿಜೆಡಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪಟ್ನಾಯಕ್ ಅವರು ಕೆಲವು ತಿಂಗಳ ಹಿಂದೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಪಟ್ನಾಯಕ್ ಅವರು ಜೂನ್ 20ರಂದು ಮುಂಬೈಗೆ ತೆರಳಿದ್ದರು. ಜೂನ್ 22ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜುಲೈ 7ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

