ಕುಂಬಳೆ: ಕಾಸರಗೋಡಿನಿಂದ ಮಂಗಳೂರಿಗೆ ತೆರಳುವ ರೈಲುಗಳಲ್ಲಿ ವಿದ್ಯಾರ್ಥಿಗಳ ಹಿಂಸಾಚಾರ ಮತ್ತು ರ್ಯಾಗಿಂಗ್ ಅನ್ನು ಪರಿಗಣಿಸಿ ರೈಲ್ವೆ ಪೋಲೀಸರು ಜಾಗರೂಕರಾಗಿರಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಕೇಳಿಕೊಂಡಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ಈ ನಿರ್ಣಯ ಮಂಡಿಸಿದರು. ವಕೀಲ, ಶಾಸಕ ಸಿ.ಎಚ್. ಕುಂಞಂಬು ಈ ನಿರ್ಣಯವನ್ನು ಬೆಂಬಲಿಸಿದರು. ಈ ನಿಟ್ಟಿನಲ್ಲಿ ರೈಲ್ವೆ ಪೋಲೀಸರಿಗೆ ಸೂಚನೆಗಳನ್ನು ನೀಡಲಾಗುವುದು ಮತ್ತು ಸಮಸ್ಯೆಗೆ ಸಂಬಂಧಿಸಿದಂತೆ ಶೀಘ್ರ ಪೋಲೀಸ್ ದಳವನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇಂನ್ಭಾಶೇಖರ್ ಹೇಳಿರುವರು.
ಮುಳಿಯಾರ್ ಎಬಿಸಿ ಕೇಂದ್ರವನ್ನು ಉದ್ಘಾಟಿಸಿದರೂ, ಪ್ರಾಣಿ ಕಲ್ಯಾಣ ಮಂಡಳಿಗೆ ಅನುಮೋದನೆ ಲಭಿಸದ ಕಾರಣ ಅದು ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಕೇಂದ್ರ ಸರ್ಕಾರದ ಪ್ರಾಣಿ ಕಲ್ಯಾಣ ಮಂಡಳಿಯ ಪ್ರತಿನಿಧಿಗಳು ಎರಡು ವಾರಗಳಲ್ಲಿ ಜಿಲ್ಲೆಗೆ ಆಗಮಿಸಲಿದ್ದು, ಪರಿಶೀಲಿಸಿ ಅನುಮೋದನೆ ಪಡೆದ ನಂತರ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ತಕ್ಷಣ ಪ್ರಾರಂಭಿಸಬಹುದು ಎಂದು ಜಿಲ್ಲಾ ಪ್ರಾಣಿ ಕಲ್ಯಾಣ ಅಧಿಕಾರಿ ಸಭೆಯಲ್ಲಿ ಹೇಳಿದರು. ಒಂದು ದಿನದಲ್ಲಿ 20 ನಾಯಿಗಳಿಗೆ ಇಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ.




