ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆಯಿತು. ಭಾರತದ ಸಂವಿಧಾನದ ಭಾಗವಾಗಿರುವ ಪಾರ್ಲಿಮೆಂಟ್ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳೇ ಚುನಾವಣಾಧಿಕಾರಿಗಳಾಗಿ ಚುನಾವಣೆ ನಡೆಸಿದರು.
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿವಿಧ ವಿಭಾಗಗಳಲ್ಲಾಗಿ ಮತದಾನ ಅಧಿಕಾರಿಗಳು, ಏಜೆಂಟ್, ಪೋಲೀಸರಾಗಿ ವಿದ್ಯಾರ್ಥಿಗಳು ಸಹಕರಿಸಿದರು. ಇಲೆಕ್ಟ್ರೋನಿಕ್ ವೋಟಿಂಗ್ ಮೆಶಿನ್ ಮೂಲಕ ನಡೆಸಿದ ಚುನಾವಣೆಯಲ್ಲಿ ಹತ್ತನೇ ತರಗತಿಯ ಶ್ರದ್ಧಾ ಎ.ಯಸ್. ಶಾಲಾ ನಾಯಕಿಯಾಗಿ ಆಯ್ಕೆಯಾದರೆ, ಒಂಭತ್ತನೇ ತರಗತಿಯ ದೀಕ್ಷಿತ್ ಉಪನಾಯಕನಾಗಿ ಆಯ್ಕೆಯಾದರು. ಮುಖ್ಯೋಪಾಧ್ಯಾಯಿನಿ ಸುನೀತ ಎ, ರಾಧಾಕೃಷ್ಣ ಬಂಬ್ರಾಣ, ಶಾನಿ, ದೇವಿಕರಾಣಿ, ಅಬ್ದುಲ್ ಕರೀಂ ಡಿ.ಕೆ. ಉಪಸ್ಥಿತರಿದ್ದರು.

-SHRADHA%20A%20S.jpg)
-DEEKSHITH.jpg)
