HEALTH TIPS

ನಮ್ಮ ಮನಸ್ಸು ಆಹಾರ ಪದ್ಧತಿ-ಆರೋಗ್ಯ ಒಂದಕ್ಕೊಂದು ಪೂರಕ: ಕೊಂಡೆವೂರು ಶ್ರೀಗಳು

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಪೂಜ್ಯ ಶ್ರೀಗಳವರ 22 ನೇ ಚಾತುರ್ಮಾಸ್ಯದ ಸುಸಂದರ್ಭ ಕರ್ಕಾಟಕ ಮಾಸದ ಔಷಧೀಯ ಗಂಜಿ ವಿತರಣೆ ಕಾರ್ಯಕ್ರಮ ನಡೆಯಿತು. ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು, ಅಡುಗೆ ಕೋಣೆಯೇ ಔಷಧಾಲಯ ಆಗಿರುವ ಸಂದರ್ಭದಲ್ಲಿ ಈಗ ನಮ್ಮ ಆಹಾರ ಪದ್ಧತಿಯ ಕಾರಣಕ್ಕಾಗಿ ಔಷಧಾಲಯವನ್ನೇ ನಂಬಿಕೊಳ್ಳುವ ಕೆಟ್ಟ ಪರಿಸ್ಥಿತಿ ಇಂದು ಬಂದಿದೆ. ಇದಕ್ಕಾಗಿ ಆಹಾರ ಪದ್ಧತಿಯಲ್ಲಿ ಜನ ಜಾಗೃತಿ ಮೂಡಿಸಲು ಕರ್ಕಾಟಕ ಮಾಸದಲ್ಲಿ ನಮ್ಮ ಪರಿಸರದಲ್ಲಿಯೇ ದೊರಕುವ ಗಿಡ, ಬಳ್ಳಿ, ಎಲೆಗಳನ್ನು ಬಳಸಿ ಔಷಧೀಯ ಗಂಜಿ ಎಂಬ ವಿಶಿಷ್ಟ ಕಾರ್ಯಕ್ರಮ ಕಳೆದ ಹಲವು ವರ್ಷಗಳಿಂದ ಏರ್ಪಡಿಸಲಾಗುತ್ತಿದ್ದು, ಅನೇಕರು ಇದರ ಪ್ರಯೋಜನ ಪಡಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 


ಖ್ಯಾತ ವೈದ್ಯರಾದ ಡಾ. ರಾಧಾಕೃಷ್ಣ ಬಂದ್ಯೋಡ್ ಅಧ್ಯಕ್ಷತೆ ವಹಿಸಿ, ಶ್ರೀ ಮಠದ ಆರೋಗ್ಯ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಅರಿವು ಇನ್ನಷ್ಟು ಜನರಿಗೆ ತಲುಪಿ ಉತ್ತಮ ಆರೋಗ್ಯವಂತರಾಗಬೇಕೆಂದು ಕರೆ ನೀಡಿದರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಧಾರ್ಮಿಕ ಕೇಂದ್ರದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದನ್ನು ಶ್ಲಾಘಿಸಿದರು. ತಲಪಾಡಿ ಶಾರದಾ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸಂದೀಪ್ ಬೇಕಲ್ ಅವರು ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಶ್ರೀ ಮಠದ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಧಾರ್ಮಿಕ ಮುಂದಾಳು ರವೀಶ್ ತಂತ್ರಿ ಕುಂಟಾರು, ಡಾ. ಸುಮಲತ ರಾಧಾಕೃಷ್ಣನ್, ಯತಿ ವಿನಯಸಾಗರ್ ಮಧ್ಯಪ್ರದೇಶ ಅತಿಥಿಗಳಾಗಿ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಅನೇಕ ಪ್ರಶಸ್ತಿಗಳಿಗೂ ಭಾಜನರಾದ ತ್ರಿಶೂರಿನ ಎಂ.ಡಿ ಸೀತಾರಾಮ ಆಯುರ್ವೇಧಿಕ್ ಸ್ಪೆóಷಾಲಿಟಿ ಆಸ್ಪತ್ರೆಯ ನಿರ್ವಾಹಕ ನಿರ್ದೇಶಕ ಡಾ.ಡಿ. ರಾಮನಾಥನ್ ಅವರಿಗೆ "ಆಯುಶ್ರೀ" 2025 ಪ್ರಶಸ್ತಿ ನೀಡಿ  ಅಭಿನಂದಿಸಲಾಯಿತು. 

ಸಭಾಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಔಷಧೀಯ ಗಿಡ ಮೂಲಿಕೆಗಳ ಕುರಿತು ನಾಟಿವೈದ್ಯ ಪವಿತ್ರನ್ ಗುರುಕ್ಕಳ್ ಅವರು ಮಾತನಾಡಿದರು. ಕರ್ಕಾಟಕ ಮಾಸದಲ್ಲಿ ಔಷಧೀಯ ಗಂಜಿಯ ಮಹತ್ವವನ್ನು ಖ್ಯಾತ ನಾಟಿ ವೈದ್ಯ ಟಿ.ಟಿ.ಅರವಿಂದಾಕ್ಷನ್ ವೈದ್ಯರ್ ಮತ್ತು ವೈದ್ಯ ಡಾ.ಗಣೇಶ್ ಕುಮಾರ್ ತಿಳಿಸಿ ಮನೆ ಮದ್ದಿನ ಮಾಹಿತಿಯನ್ನೂ ನೀಡಿದರು.

ಕು. ಶ್ರಾವಣ್ಯ ಕೊಂಡೆವೂರು ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶ್ರೀ ಮಠದ ಆರೋಗ್ಯ ಯೋಜನೆಯ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳದ ಅಧ್ಯಕ್ಷ ಜಯದೇವನ್ ಕಣ್ಣೂರು ಸ್ವಾಗತಿಸಿದರು. ಕೆ.ಯಂ, ಗಂಗಾಧರ್ ವಂದಿಸಿದರು. ದಿನಕರ್ ಹೊಸಂಗಡಿ ಮತ್ತು  ಪ್ರಶಾಂತ್ ತೋಲಂಬರ ನಿರೂಪಿಸಿದರು.

ಬಳಿಕ ಕೇರಳದ ಖ್ಯಾತ ನಾಟಿ ವೈದ್ಯರುಗಳು ವಿವಿಧ ಬಗೆಯ ಸಸ್ಯ ಎಲೆ, ಬಳ್ಳಿಗಳನ್ನು ಉಪಯೋಗಿಸಿ ತಯಾರಿಸಿದ ಅನೇಕ ವಿವಿಧ ಖಾಧ್ಯಗಳನ್ನು ಒಳಗೊಂಡ ಔಷಧೀಯ ಗಂಜಿಯನ್ನು ಆಗಮಿಸಿದ 2000 ಕ್ಕಿಂತ ಹೆಚ್ಚು ಜನರು ಸವಿದು ಸಂತಸ ಪಟ್ಟರಲ್ಲದೆ ಆಸಕ್ತಿಯಿಂದ ಮಾಹಿತಿಗಳನ್ನು ಪಡಕೊಂಡರು. 

ಮಾಸದ ಔಷಧೀಯ ಗಂಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಅಡುಗೆ ಕೋಣೆಯೇ ಔಷಧಾಲಯ ಆಗಿರುವ ಸಂದರ್ಭದಲ್ಲಿ ಈಗ ನಮ್ಮ ಆಹಾರ ಪದ್ಧತಿಯ ಕಾರಣಕ್ಕಾಗಿ ಔಷಧಾಲಯವನ್ನೇ ನಂಬಿಕೊಳ್ಳುವ ಕೆಟ್ಟ ಪರಿಸ್ಥಿತಿ ಇಂದು ಬಂದಿದೆ. ಇದಕ್ಕಾಗಿ ಆಹಾರ ಪದ್ಧತಿಯಲ್ಲಿ ಜನ ಜಾಗೃತಿ ಮೂಡಿಸಲು ಕರ್ಕಾಟಕ ಮಾಸದಲ್ಲಿ ನಮ್ಮ ಪರಿಸರದಲ್ಲಿಯೇ ದೊರಕುವ ಗಿಡ, ಬಳ್ಳಿ, ಎಲೆಗಳನ್ನು ಬಳಸಿ ಔಷಧೀಯ ಗಂಜಿ ಎಂಬ ವಿಶಿಷ್ಟ ಕಾರ್ಯಕ್ರಮ ಕಳೆದ ಹಲವು ವರ್ಷಗಳಿಂದ ಜರಗುತ್ತಿದ್ದು  ಅನೇಕರು ಇದರ ಪ್ರಯೋಜನ ಪಡಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ವೈದ್ಯರಾದ ಡಾ. ರಾಧಾಕೃಷ್ಣ ಬಂದ್ಯೋಡ್‍ರವರು ಶ್ರೀ ಮಠದ ಆರೋಗ್ಯ ಯೋಜನೆಯಡಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಅರಿವು ಇನ್ನಷ್ಟು ಜನರಿಗೆ ತಲುಪಿ ಉತ್ತಮ ಆರೋಗ್ಯವಂತರಾಗಬೇಕೆಂದು ಅಪೇಕ್ಷಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಸರಗೋಡು ಲೋಕಸಭಾ ಸದಸ್ಯರಾದ ಶ್ರೀ ರಾಜಮೋಹನ್ ಉಣ್ಣಿತ್ತಾನ್‍ರವರು ಧಾರ್ಮಿಕ ಕೇಂದ್ರದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದನ್ನು ಶ್ಲಾಘಿಸಿದರು. ತಲಪಾಡಿ ಶಾರದಾ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂದೀಪ್ ಬೇಕಲ್‍ರವರು ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಶ್ರೀ ಮಠದ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಮಾಜಿ ಎ0.ಎಲ್.ಪಿ ಶ್ರೀ ಮೋನಪ್ಪ ಭಂಡಾರಿ, ಧಾರ್ಮಿಕ ಮುಂದಾಳು ಶ್ರೀ ರವೀಶ್ ತಂತ್ರಿ ಕುಂಟಾರು, ಡಾ. ಸುಮಲತ ರಾಧಾಕೃಷ್ಣನ್ ಯತಿ ವಿನಯಸಾಗರ್ ಮಧ್ಯಪ್ರದೇಶ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಅನೇಕ ಪ್ರಶಸ್ತಿಗಳಿಗೂ ಭಾಜನರಾದ ತ್ರಿಶೂರಿನ ಎಂ.ಡಿ ಸೀತಾರಾಮ ಆಯುರ್ವೇಧಿಕ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ವಾಹಕ ನಿರ್ದೇಶಕರಾದ ಡಾ.ಡಿ. ರಾಮನಾಥನ್ ಅವರಿಗೆ "ಆಯುಶ್ರೀ" 2025 ಪ್ರಶಸ್ತಿ ನೀಡಿ  ಅಭಿನಂದಿಸಲಾಯಿತು. 

ಸಭಾಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಔಷಧೀಯ ಗಿಡ ಮೂಲಿಕೆಗಳ ಕುರಿತು ನಾಟಿವೈದ್ಯರಾದ ಶ್ರೀ ಪವಿತ್ರನ್ ಗುರುಕ್ಕಳ್‍ರವರು ಪ್ರಸಾದಿಕವಾಗಿ ಮಾತನಾಡಿದರು.

ಕರ್ಕಾಟಕ ಮಾಸದಲ್ಲಿ ಔಷಧೀಯ ಗಂಜಿಯ ಮಹತ್ವವನ್ನು ಖ್ಯಾತ ನಾಟಿ ವೈದ್ಯರಾದ ಶ್ರೀ ಟಿ.ಟಿ.ಅರವಿಂದಾಕ್ಷನ್ ವೈದ್ಯರ್ ಮತ್ತು ಪೈವಳಿಕೆಯ ಮೆಡಿಕಲ್ ಆಫೀಸರ್ ರಾದ ಡಾ.ಗಣೇಶ್ ಕುಮಾರ್ ತಿಳಿಸಿದರಲ್ಲದೆ ಮನೆ ಮದ್ದಿನ ಮಾಹಿತಿಯನ್ನೂ ನೀಡಿದರು.

ಕು. ಶ್ರಾವಣ್ಯ ಕೊಂಡೆವೂರು ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಮಠದ ಆರೋಗ್ಯ ಯೋಜನೆಯ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳದ ಅಧ್ಯಕ್ಷರಾದ ಶ್ರೀ ಜಯದೇವನ್ ಕಣ್ಣೂರು ಮಾಡಿದರು. ಶ್ರೀ ಕೆ.ಯಂ, ಗಂಗಾಧರ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ದಿನಕರ್ ಹೊಸಂಗಡಿ ಮತ್ತು  ಶ್ರೀ ಪ್ರಶಾಂತ್ ತೋಲಂಬರ ನಡೆಸಿಕೊಟ್ಟರು.

ಬಳಿಕ ಕೇರಳದ ಖ್ಯಾತ ನಾಟಿ ವೈದ್ಯರುಗಳು ವಿವಿಧ ಬಗೆಯ ಸಸ್ಯ ಎಲೆ, ಬಳ್ಳಿಗಳನ್ನು ಉಪಯೋಗಿಸಿ ತಯಾರಿಸಿದ ಅನೇಕ ವಿವಿಧ ಖಾಧ್ಯಗಳನ್ನು ಒಳಗೊಂಡ ಔಷಧೀಯ ಗಂಜಿಯನ್ನು ಆಗಮಿಸಿದ 2000 ಕ್ಕಿಂತ ಹೆಚ್ಚು ಜನರು ಸವಿದು ಸಂತಸ ಪಟ್ಟರಲ್ಲದೆ ಆಸಕ್ತಿಯಿಂದ ಮಾಹಿತಿಗಳನ್ನು ಪಡಕೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries