ಕೊಚ್ಚಿ: ಸಿ.ಎಂ.ಆರ್.ಎಲ್. ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಬಿಜೆಪಿ ನಾಯಕ ಶಾನ್ ಜಾರ್ಜ್ ಅವರಿಗೆ ಹೈಕೋರ್ಟ್‍ನಲ್ಲಿ ಹಿನ್ನಡೆಯಾಗಿದೆ. ಗಂಭೀರ ವಂಚನೆ ತನಿಖಾ ಸಂಸ್ಥೆ ಹೊಂದಿರುವ ದಾಖಲೆಗಳ ಪ್ರತಿಗಳನ್ನು ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಶಾನ್ ಜಾರ್ಜ್ ಈ ಹಿಂದೆ ಕೆಳ ನ್ಯಾಯಾಲಯದಿಂದ ಕೆಲವು ದಾಖಲೆಗಳನ್ನು ಪಡೆಯುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯವು ದಾಖಲೆಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದರೂ, ಸಿ.ಎಂ.ಆರ್.ಎಲ್. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತು. ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು.
ಇದಕ್ಕೂ ಮೊದಲು, ಶಾನ್ ಜಾರ್ಜ್ ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಅಒಖಐ ವಿರುದ್ಧ ಸಾರ್ವಜನಿಕ ಆರೋಪಗಳನ್ನು ಮಾಡದಂತೆ ನ್ಯಾಯಾಲಯವು ನಿರ್ಬಂಧಿಸಿತ್ತು.




