ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಹಾಗೂ ಕ್ಷೇತ್ರದ ಪಾವಿತ್ರ್ಯತೆಗೆ ಕಳಂಕವನ್ನುಂಟುಮಾಡಲು ನಡೆಯುತ್ತಿರುವ ದುಷ್ಟ ಶಕ್ತಿಗಳ ಪ್ರಯತ್ನ ವಿಫಲವಾಗಬೇಕು, ಲೋಕ ಸುಭಿಕ್ಷವಾಗಲಿ ಎಂಬ ಧ್ಯೇಯದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ವಿಶೇಷ ಭಜನೆ, ಹರಿಸಂಕೀರ್ತನೆ ದಿನಪೂರ್ತಿ ಜರುಗಿತು.
ಮೂರು ದಿನಗಳ ಕಾಲ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದ ಮೊದಲ ದಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಕಲೆ- ಸಂಸ್ಕೃತಿ- ಸಾಹಿತ್ಯ ಉಳಿಸುವ, ಬೆಳೆಸುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯನ್ವಯ ಮೂರುದಿನಗಳಲ್ಲಿ ಭಜನೆ- ಹರಿಸಂಕೀತನೆ- ಗಮಕ -ಹವ್ಯಾಸಿ ತಂಡಗಳ ಯಕ್ಷಗಾನ ತಾಳಮದ್ದಳೆಗಳು, ವಿದ್ಯಾರ್ಥಿ ಸಮಾಗಮ ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸಮಾರಂಭ ಉದ್ಘಾಟಿಸಿ ನಮ್ಮ ದೇಶದ ಪ್ರಧಾನ ಶ್ರದ್ದಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ. ಅಂತಹ ಕ್ಷೇತ್ರಕ್ಕೆ ಹಾಗೂ ಪೂಜ್ಯರಿಗೆ ಅವಹೇಳನಕಾರಿಯಾಗಿ ಮಾತನಾಡುವ ದುಷ್ಟ ಪ್ರವೃತ್ತಿಯನ್ನು ಸಂಪೂರ್ಣ ತೊಡೆದುಹಾಕುವುದರ ಜತೆಗೆ ಕಾವಂದರ ಆಶಯದ ಸುಂದರ ಸುಭಿಕ್ಷ ಸಮಾಜ ನಿರ್ಮಾಣ ವಾಗಬೇಕು ಎಂದು ತಿಳಿಸಿದರು. ವಿಶ್ರಾಂತ ಪ್ರಾಂಶುಪಾಲರಾದ ಪಿ. ಯನ್. ಮೂಡಿತ್ತಾಯ, ಶ್ರೀಮತಿ ಸುಮಿತ್ರಾ ಮಯ್ಯ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅದ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಜಗದೀಶ ಕೆ. ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ದಿನಪೂರ್ತಿ ಭಜನಾ ಸತ್ಸಂಗ ಜರಗಿತು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಕಲೆ- ಸಂಸ್ಕೃತಿ- ಸಾಹಿತ್ಯ ಉಳಿಸುವ, ಬೆಳೆಸುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯನ್ವಯ ಆಯೋಜಿಸಲಾಗಿದ್ದ ಭಜನೆ- ಹರಿಸಂಕೀತನೆ- ಗಮಕ -ಹವ್ಯಾಸಿ ತಂಡಗಳ ಯಕ್ಷಗಾನ ತಾಳಮದ್ದಳೆಗಳು, ವಿದ್ಯಾರ್ಥಿ ಸಮಾಗಮ ಜರುಗಿತು.






