ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣಕ್ಕೆ ಮೀಸಲಿರಿಸಿದ ಜಾಗದಲ್ಲಿ ವ್ಯಾಪಕವಾಗಿ ಕಟ್ಟಡಗಳ ನಿರ್ಮಾಣ ಹಾಗೂ ಶೋಚನೀಯ ಸ್ಥಿತಿಯ ವಿರುದ್ಧ ಜಂಟಿ ಮುಷ್ಕರ ಸಮಿತಿಯ ನೇತೃತ್ವದಲ್ಲಿ ಬಸ್ ಮಾಲೀಕರು ಮತ್ತು ನೌಕರರು ಸಂಜೆ ಧರಣಿ ನಡೆಸಿದರು. ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಟಿ. ಕೆ ರಾಜನ್ ಧರಣಿ ಉದ್ಘಾಟಿಸಿದರು.
ಬಸ್ ನಿಲ್ದಾಣ ವಠಾರದಲ್ಲಿ ಬೀದಿ ವ್ಯಾಪಾರಿಗಳ ಪುನರ್ವಸತಿಗಾಗಿ ನಿರ್ಮಿಸಲಾದ ವ್ಯಾಪರಿ ಸಮುಚ್ಛಯದ ಮುಂದೆ ಸುರಕ್ಷಾ ಬೇಲಿಗಳ ನಿರ್ಮಾಣ, ಬಸ್ಸುಗಳ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ಒದಗಿಸುವುದು, ಪ್ರಯಾಣಿಕರಿಗೆ ಉಪಯುಕ್ತವಾಗಿದ್ದ ಮಾಹಿತಿ ಕೇಂದ್ರವನ್ನು ಪುನಃ ಸ್ಥಾಪಿಸುವುದು, ಸಾಮಗ್ರಿ ಸಂಗ್ರಹಿಸಿಟ್ಟುಕೊಳ್ಳುವ ಕ್ಲೋಕ್‍ರೂಮ್ ಪುನಃಸ್ಥಾಪಿಸುವುದು, ಮಹಿಳೆಯರಿಗಾಗಿ ನಿರ್ಮಿಸಿರುವ ವಿಶ್ರಾಂತಿ ಕೇಂದ್ರದ ಸೂಕ್ತ ನಿರ್ವಹಣೆ ಮತ್ತು ಬಸ್ ನಿಲ್ದಾಣದೊಳಗೆ ಸುತ್ತಾಡುವ ಜಾನುವಾರುಗಳನ್ನು ತೆರವುಗೊಳಿಸುವುದು ಮುಂತಾದ ಬೇಡಿಕೆ ಮುಂದಿರಿಸಿ ಸಂಜೆ ಧರಣಿ ಆಯೋಜಿಸಲಾಗಿತ್ತು.
ಕಾಸರಗೋಡು ಜಿಲ್ಲಾ ಖಾಸಗಿ ಬಸ್ ನಿರ್ವಾಹಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಗಿರೀಶ್ ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ನಗರ ಸಭಾ ಪ್ರತಿಪಕ್ಷ ನಾಯಕ ಪಿ. ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಖಾಸಗಿ ಬಸ್ ನಿರ್ವಾಹಕರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಟಿ. ಲಕ್ಷ್ಮಣನ್, ಉಪಾಧ್ಯಕ್ಷ ಕೆ.ಎನ್. ಬಾಲಕೃಷ್ಣನ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್, ಪಿ.ಎ. ಮುಹಮ್ಮದ್‍ಕುಞÂ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡು ತಾಲೂಕು ಬಸ್ ನಿರ್ವಾಹಕರ ಒಕ್ಕೂಟದ ಕಾರ್ಯದರ್ಶಿ ಸಿ.ಎ. ಮುಹಮ್ಮದ್‍ಕುಞÂ ಸ್ವಾಗತಿಸಿದರು.


