ಮಂಜೇಶ್ವರ: ಉದ್ಯಾವರ ತೋಟ ಜಿ.ಎಂ.ಎಲ್.ಪಿ. ಶಾಲೆಯಲ್ಲಿ ಭಾರತದ 79 ನೇ ಸ್ವಾತಂತ್ರ್ಯೋತ್ಸವವನ್ನು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಧ್ವಜಾರೋಹಣಗೈದರು. ಬಳಿಕ ಸಭಾ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಆಸಿಸ್ ಉದ್ಯಾವರ, ರಿಝ್ ವಾನ್ ಅಮಾನಿ, ಅಬ್ದುಲ್ಲ ಮೋನು, ನೌಷಾದ್, ಅನ್ವರ್, ಬದ್ರುದ್ದೀನ್ ಶುಭಾಶಂಸನೆಗೈದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ದೇಶಭಕ್ತಿಗೀತೆ, ಭಾಷಣ ಮೊದಲಾದ ಚಟುವಟಿಕೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಅಧ್ಯಾಪಕರಾದ ಅಭಿಲಾಷ್ ರಾವ್, ಪ್ರಮೀಳ, ಸೆಮೀನ, ತಾಹಿರ,ಶೈಲಾ ಸಹಕರಿಸಿದರು. ಇಸ್ಮಾಯಿಲ್ ಮೀಯಪದವು ಸ್ವಾಗತಿಸಿ, ಶಿಕ್ಷಕಿ ಮುಫೀದ ವಂದಿಸಿದರು.




.jpg)
