ಕುಂಬಳೆ: ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ವಾರ್ಷಿಕೋತ್ಸವ, ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಬಯಲಾಟ ಕಾರ್ಯಕ್ರಮ ಆಗಸ್ಟ್ 28 ರಂದು ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಸಮೀಪದಲ್ಲಿರುವ ಸಾಯಿತನ್ವಿ ನಿವಾಸದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಈ ವರ್ಷದ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ಹಿರಿಯ ಬಣ್ಣದ ವೇಷಧಾರಿಗಳಾದ ಸುರೇಶ್ ಕುಪ್ಪೆಪದವುರವರಿಗೆ ಮತ್ತು ಬಣ್ಣದ ಮಹಾಲಿಂಗ ಯಕ್ಷ ಸನ್ಮಾನವನ್ನು ಹಿರಿಯ ಬಣ್ಣದ ವೇಷಧಾರಿ ನೀರ್ಚಾಲು ಮಾಧವ ಪಾಟಾಳಿಯವರಿಗೆ ಪ್ರದಾನ ಮಾಡಲಾಗುವುದು. ಸಂಸ್ಮರಣಾ ಕಾರ್ಯಕ್ರಮದ ಭಾಗವಾಗಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ನಡೆಯಲಿದೆ.,
ಇದರ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಸಂಜೆ ಸಾಯಿತನ್ವಿ ನಿವಾಸದಲ್ಲಿ ಉದ್ಯಮಿಗಳಾದ ಶಿವಶಂಕರ ನೆಕ್ರಾಜೆ ಮತ್ತು ಜಯಲಕ್ಷ್ಮಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮನೀಶ್ ಎಡನೀರು ವಂದಿಸಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಮಹಾಲಿಂಗ ಕೆ. ದೇರೇಬೈಲು, ಸಂಚಾಲಕ ತಿಮ್ಮಪ್ಪ ಪುತ್ತೂರು, ಖಜಾಂಚಿ ರವಿಶಂಕರ ಪಳ್ಳತ್ತಡ್ಕ ಮತ್ತು ಪದಾಧಿಕಾರಿಗಳಾದ ಜಯರಾಮ ಪಾಟಾಳಿ ಪಡುಮಲೆ, ಹರೀಶ್ ರಾಜ್ ಕುರಿಯತ್ತಡ್ಕ, ಕೆ.ಸಿ. ಮೋಹನ ಕಳತ್ತೂರು, ಗಣೇಶ್ ಪಾರಕಟ್ಟ, ನಾರಾಯಣ ಎಸ್ ಬಿ, ರಮೇಶ ಪೆರ್ಣೆ, ಮಾನ ಮಾಸ್ತರ್ ಸೀತಾಂಗೋಳಿ, ರಾಮಚಂದ್ರ ಬೆಳ್ಳಿಗೆ, ಮಹಾಲಿಂಗ ಪೆರ್ಣೆ, ಗಣೇಶ್ ನಾಯ್ಕಾಪು, ರಾಮ ಪೆÇಯ್ಯಕಂಡ ಮತ್ತಿರರು ಭಾಗವಹಿಸಿದ್ದರು.





