ತಿರುವನಂತಪುರಂ: ಹಬ್ಬ ಹರಿದಿನಗಳಲ್ಲಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಹಿಂದೆ, ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಫೇಸ್‍ಬುಕ್ ಮೂಲಕ ಈ ಬಗ್ಗೆ ನಿರ್ಧಾರ ಪ್ರಕಟಿಸಿದ್ದರು. ಆಚರಣೆಗಳ ಸಮಯದಲ್ಲಿ ಮಕ್ಕಳು ವರ್ಣರಂಜಿತ ಚಿಟ್ಟೆಗಳಂತೆ ಹಾರಬೇಕು ಎಂದು ಅವರು ಫೇಸ್‍ಬುಕ್‍ನಲ್ಲಿ ಬರೆದಿದ್ದರು.
ಓಣಂ, ಕ್ರಿಸ್‍ಮಸ್ ಮತ್ತು ರಂಜಾನ್‍ನಂತಹ ಹಬ್ಬಗಳಿಗೆ ಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆಯುವಾಗ ಸಮವಸ್ತ್ರವನ್ನು ಸಡಿಲಿಸಬೇಕೆಂದು ಅನೇಕ ಮಕ್ಕಳು ವಿನಂತಿಸಿದ್ದರು.
ಈ ಬೇಡಿಕೆ ಸಮರ್ಥನೀಯವೆಂದು ಕಂಡುಬಂದಿದೆ. ಆದ್ದರಿಂದ, ಇನ್ನು ಮುಂದೆ, ಶಾಲೆಗಳಲ್ಲಿ ಈ ಮೂರು ಪ್ರಮುಖ ಹಬ್ಬಗಳನ್ನು ಆಚರಿಸುವಾಗ ಮಕ್ಕಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗುವುದಿಲ್ಲ.
ಈ ಹೊಸ ನಿರ್ಧಾರವು ಶಾಲಾ ಪರಿಸರಕ್ಕೆ ಹೆಚ್ಚಿನ ಸಂತೋಷ ಮತ್ತು ವರ್ಣರಂಜಿತ ನೆನಪುಗಳನ್ನು ತರುತ್ತದೆ ಎಂದು ಆಶಿಸುತ್ತೇನೆ ಎಂದು ಸಚಿವ ವಿ ಶಿವನ್‍ಕುಟ್ಟಿ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

