ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಅಗೋಸ್ಟ್ 15 ರಂದು ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ವಿವಿಧ ಧಾರ್ಮಿಕ, ಭಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಬೆಳಗ್ಗೆ 07.30 ಕ್ಕೆ ಮಹಾಪೂಜೆ, ಬೆಳಗ್ಗೆ 07. ರಿಂದ ಮಧ್ಯಾಹ್ನ 11.30ರ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ 11.30 ರಿಂದ 1ರ ತನಕ ಯಕ್ಷಗಾನ ತಾಳಮದ್ದಳೆ, 12.30 ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6. ರಿಂದ 07.30 ಭಜನೆ, ರಾತ್ರಿ 07.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ದೀಪಾರಾದನೆ ಸಹಿತ ವಿಶೇಷ ಕಾರ್ತಿಕ ಪೂಜೆ ಪ್ರಸಾದ ವಿತರಣೆ, ಲಘು ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.




