HEALTH TIPS

ಅಮೆರಿಕ ಸುಂಕ ಸಮರ ಬಗೆಹರಿಸಲು ಹಲವು ಹಂತಗಳಲ್ಲಿ ಮಾತುಕತೆ: ಸರ್ಕಾರದ ಮೂಲಗಳು

ನವದೆಹಲಿ: ಭಾರತದ ಆಮದು ವಸ್ತುಗಳ ಮೇಲೆ ಅಮೆರಿಕದ ಶೇಕಡಾ 50ರಷ್ಟು ಸುಂಕಗಳು ಅಧಿಕೃತವಾಗಿ ಜಾರಿಗೆ ಬಂದಿರುವುದರಿಂದ, ಇದರ ಪರಿಣಾಮಗಳನ್ನು ತಗ್ಗಿಸುವ ಭಾರತ ಸರ್ಕಾರ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ರಫ್ತುದಾರರು ಮತ್ತು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ರಫ್ತುದಾರರೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಎರಡೂ ದೇಶಗಳ ನಡುವೆ ಅಧಿಕೃತ ಮಟ್ಟದ ಮಾತುಕತೆಗಳು ಸಹ ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕಚೇರಿ (PMO), ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ವಾಣಿಜ್ಯ ಸಚಿವಾಲಯವು ರಫ್ತುದಾರರ ಮೇಲಿನ ಪರಿಣಾಮವನ್ನು ತಗ್ಗಿಸಲು ಜಂಟಿಯಾಗಿ ಪ್ರಯತ್ನಗಳನ್ನು ನಡೆಸುತ್ತಿವೆ.

ಈ ಬಗ್ಗೆ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಅಧಿಕಾರಿ, ಸರ್ಕಾರವು ಸುಂಕದ ಅವ್ಯವಸ್ಥೆಯಿಂದ ಹೊರಬರಲು ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ರಾಜತಾಂತ್ರಿಕ, ರಾಜಕೀಯ ಮತ್ತು ವಾಣಿಜ್ಯ - ಬಹು ಹಂತಗಳಲ್ಲಿ ಮಾತುಕತೆಗಳನ್ನು ನಡೆಸುತ್ತಿವೆ ಎಂದು ಹೇಳಿದರು.

ಡೆಮೋಕ್ರಾಟ್‌ಗಳು ಮತ್ತು ಅಲ್ಲಿನ ವ್ಯವಹಾರಗಳನ್ನು ಬಳಸಿಕೊಂಡು ಟ್ರಂಪ್ ಆಡಳಿತದ ಮೇಲೆ ಒತ್ತಡ ಹೇರುವುದು ತಂತ್ರಗಳಲ್ಲಿ ಒಂದಾಗಿದೆ. ಅಧಿಕ ಸುಂಕ ಹೇರಿಕೆಯಿಂದ ಅಮೆರಿಕದಲ್ಲಿ ಸಹ ತೊಂದರೆ ಉದ್ಯಮಗಳು ತೊಂದರೆ ಅನುಭವಿಸುತ್ತಿವೆ ಎಂದರು.

ಈ ಮಧ್ಯೆ ಭಾರತ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳ ನಡುವೆ ಪ್ರತ್ಯೇಕ ಸಭೆಗಳು ನಡೆಯುತ್ತಿವೆ. ಹೊಸ ಸುಂಕಗಳಿಂದ ಉಂಟಾದ ದ್ರವ್ಯತೆ ಮತ್ತು ಆರ್ಥಿಕ ಕಳವಳಗಳನ್ನು ಪರಿಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ವ್ಯಾಪಾರ ಸಂಸ್ಥೆಗಳೊಂದಿಗೆ ಸಂವಾದಗಳನ್ನು ಪ್ರಾರಂಭಿಸಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ಹಿಂದೆ ರಫ್ತುದಾರರಿಗೆ ಭರವಸೆ ನೀಡಿದ್ದರು.

ನಿನ್ನೆ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ನಿಯೋಗವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿತು. ಸರ್ಕಾರವು ಕಾರ್ಮಿಕರ ಜೀವನೋಪಾಯವನ್ನು ರಕ್ಷಿಸುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಜಾಗತಿಕ ಪ್ರಕ್ಷುಬ್ಧತೆಯ ಹೊರತಾಗಿಯೂ ಉದ್ಯೋಗಿಗಳಿಗೆ ಉದ್ಯೋಗ ನಿರಂತರತೆಯ ಬಗ್ಗೆ ಭರವಸೆ ನೀಡಬೇಕೆಂದು ಉದ್ಯಮದ ನಾಯಕರನ್ನು ಒತ್ತಾಯಿಸಿದರು. ರಫ್ತುದಾರರು, ತಮ್ಮ ವ್ಯವಹಾರಗಳ ಮೇಲಿನ ಪರಿಣಾಮದ ಬಗ್ಗೆ ಕಳವಳ ಹೊಂದಿದ್ದರೂ, ಅಮೆರಿಕದ ಸುಂಕದ ಒತ್ತಡವನ್ನು ನಿಭಾಯಿಸುವ ಸರ್ಕಾರದ ನಿಲುವನ್ನು ಬೆಂಬಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries