ಕಣ್ಣೂರು: ಕಣ್ಣೂರು ವಿಶ್ವವಿದ್ಯಾಲಯ ಒಕ್ಕೂಟದ ಚುನಾವಣೆಯ ಸಂದರ್ಭದಲ್ಲಿ ಘಷಣೆ ನಡೆದಿದೆ. ಎಸ್.ಎಫ್.ಐ ಮತ್ತು ಯುಡಿಎಸ್.ಎಫ್ ಕಾರ್ಯಕರ್ತರು ಗಿಡಗಳ ಕುಂಡಗಳು ಮತ್ತು ಕೋಲುಗಳಿಂದ ಘರ್ಷಣೆ ನಡೆಸಿದರು.
ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ, ಪೋಲೀಸರು ಲಾಠಿಚಾರ್ಜ್ ನಡೆಸಿದರು. ಲಾಠಿಚಾರ್ಜ್‍ನಲ್ಲಿ ಎಸ್.ಎಫ್.ಐ ಜಿಲ್ಲಾ ಸಮಿತಿ ಸದಸ್ಯ ಗಾಯಗೊಂಡರು. ಎಸ್.ಎಫ್.ಐ ಕಾರ್ಯಕರ್ತರು ಮತ್ತು ಪೆÇಲೀಸರು ತಮ್ಮನ್ನು ಥಳಿಸಿದ್ದಾರೆ ಎಂದು ಯುಡಿಎಸ್.ಎಫ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಪಿ ಎಸ್ ಸಂಜೀವ್ ಅವರು ಯುಡಿಎಸ್.ಎಫ್ ಚುನಾವಣೆಯಲ್ಲಿ ಅಕ್ರಮ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದಾಗ ಘರ್ಷಣೆ ಪ್ರಾರಂಭವಾಯಿತು. ಪೆÇಲೀಸರು ಯಾವುದೇ ಕಾರಣವಿಲ್ಲದೆ ಅವರನ್ನು ಥಳಿಸಿದ್ದಾರೆ ಎಂದು ಎಸ್.ಎಫ್.ಐ ಆರೋಪಿಸಿದೆ. ಈ ಮಧ್ಯೆ, ಎಸ್.ಎಫ್.ಐ ಅಭ್ಯರ್ಥಿಯೊಬ್ಬರು ಯುಡಿಎಸ್.ಎಫ್ ಬ್ಯಾಗ್ ಕಸಿದುಕೊಂಡಿದ್ದಾರೆ ಎಂಬ ಆರೋಪದ ನಂತರ ದೊಡ್ಡ ಘರ್ಷಣೆ ಭುಗಿಲೆದ್ದಿತು.
ನಂತರ ಪೆÇಲೀಸರು ಎಸ್.ಎಫ್.ಐ ಜಂಟಿ ಕಾರ್ಯದರ್ಶಿ ಅಭ್ಯರ್ಥಿ ಆದಿಶ ಕೆ ಅವರನ್ನು ಬಂಧಿಸಿದರು. ಇದರ ನಂತರ, ಎಸ್.ಎಫ್.ಐ ಕಾರ್ಯಕರ್ತರು ಮತ್ತು ಪೆÇಲೀಸರ ನಡುವೆ ಘರ್ಷಣೆ ನಡೆಯಿತು. ಎಸ್.ಎಫ್.ಐ ಅಭ್ಯರ್ಥಿಯನ್ನು ಕಾರ್ಯಕರ್ತರು ಪೆÇಲೀಸರಿಂದ ರಕ್ಷಿಸಿದರು.




