ಕುಂಬಳೆ: ಮಂಜೇಶ್ವರ ತಾಲೂಕು ಮಟ್ಟದ "ಓಣಂ ಸಂತೆ"ಯ ಉದ್ಘಾಟನೆ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನ ಸೀತಾಂಗೋಳಿಯಲ್ಲಿ ಬುಧವಾರ ನಡೆಯಿತು. ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ ಸುಬ್ಬಣ್ಣ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಾಯಕ ರಿಜಿಸ್ಟ್ರಾರ್ ರವೀಂದ್ರ ಎ. ಓಣಂ ಕಿಟ್‍ನ ಪ್ರಥಮ ವಿತರಣೆಯನ್ನು ಮಾಡಿದರು. ವಿವಿಧ ಬ್ಯಾಂಕ್‍ಗಳ ಅಧ್ಯಕ್ಷರು, ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಬ್ಯಾಂಕ್ ನ ನಿರ್ದೇಶಕರು ಹಾಗೂ ಸರ್ಕಲ್ ಸಹಕಾರಿ ಯೂನಿಯನ್‍ನ ನಿರ್ದೇಶಕರು ಆಗಿರುವ ಶ್ರೀಕೃಷ್ಣಪ್ರಸಾದ ಸ್ವಾಗತಿಸಿದರು. ಎಡನಾಡು ಬ್ಯಾಂಕ್‍ನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ವಂದಿಸಿದರು.




.jpg)
