ವಾಷಿಂಗ್ಟನ್: ಭಾರತ ಹಾಗೂ ರಷ್ಯಾದ ವಿರುದ್ಧ ತೀವ್ರ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡು ರಾಷ್ಟ್ರಗಳು ನಿಕಟ ಬಾಂಧವ್ಯ ಹೊಂದಿರುವ ಕುರಿತು ನಾವು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಎರಡು ರಾಷ್ಟ್ರಗಳು ಆರ್ಥಿಕತೆಯು ನಿರ್ಜೀವ ಆರ್ಥಿಕತೆಯಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದ ಫೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಭಾರತದೊಂದಿಗೆ ನಾವು ಅತ್ಯಂತ ಸಣ್ಣ ವ್ಯಾಪಾರವನ್ನು ಮಾಡಿದ್ದೇವೆ, ಅಮೆರಿಕದ ಉತ್ಪನ್ನಗಳಿಗೆ ಇತರ ರಾಷ್ಟ್ರಗಳು ವಿಧಿಸುವ ತೆರಿಗೆಗಿಂತ ಭಾರತದ ಸುಂಕ ಅತಿ ಹೆಚ್ಚು. ಅದೇ ರೀತಿ, ಅಮೆರಿಕ ಹಾಗೂ ರಷ್ಯಾ ಬಹುತೇಕ ಯಾವುದೇ ವ್ಯಾಪಾರ ಒಪ್ಪಂದ ಹೊಂದಿಲ್ಲ. ಅದು ಒಂದು ಒಂದೆಡೆ ಇರಲಿ. ಆದರೆ ಈಗಲೂ ತಾನೇ ಅಧ್ಯಕ್ಷ ಎಂದು ಭಾವಿಸಿರುವ ವ್ಯಕ್ತಿಯು ತನ್ನ ಮಾತನ್ನು ಇನ್ನೂ ಕೇಳುತ್ತಾರೆ ಎಂಬ ಭ್ರಮೆಯಲ್ಲಿದ್ದಾನೆ. ಆತ ಅತ್ಯಂತ ಅಪಾಯಕಾರಿ ಪ್ರದೇಶಕ್ಕೆ ಪ್ರವೇಶಿಸುತ್ತಿದ್ದಾನೆ ಎಂದು ಆತನಿಗೆ ಯಾರಾದರೂ ಹೇಳಿ ಎಚ್ಚರಿಸಿ' ಎಂದು ಬರೆದುಕೊಂಡಿದ್ದಾರೆ.




