ತೈಪೆ: ಉತ್ತರ ಚೀನಾದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ ಎಂದು ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.
'ಉರಾದ್ ರಿಯರ್ ಬ್ಯಾನರ್'ನ ಶಿಬಿರ ಇರುವ ಪ್ರದೇಶದಲ್ಲಿ ಶನಿವಾರ ಪ್ರವಾಹ ಸಂಭವಿಸಿದ್ದು, 13 ಮಂದಿ ಶಿಬಿರಾರ್ಥಿಗಳು ನಾಪತ್ತೆಯಾಗಿದ್ದರು.
ಭಾನುವಾರ ಒಬ್ಬರನ್ನು ರಕ್ಷಿಸಲಾಗಿದೆ ಮತ್ತು ಎಂಟು ಮೃತದೇಹಗಳು ಪತ್ತೆಯಾಗಿವೆ. ಕಾಣೆಯಾದ ಉಳಿದ ನಾಲ್ವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ' ಎಂದು ಸುದ್ದಿಸಂಸ್ಥೆಯೊಂದು ತಿಳಿಸಿದೆ.




