ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯವು ವಾಚನ ವಾರಾಚರಣೆಯ ಅಂಗವಾಗಿ ವಿಜಯೋತ್ಸವ ಮತ್ತು ಪುಸ್ತಕ ಚರ್ಚೆಯನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು ತಾಲ್ಲೂಕು ಗ್ರಂಥಾಲಯ ಕೌನ್ಸಿಲ್ ಅಧ್ಯಕ್ಷೆ ವಕೀಲೆ ಪಿ.ಪಿ. ಶ್ಯಾಮಲಾ ದೇವಿ ಅವರು ರಾಮ್-ಆನಂದಿ ಪುಸ್ತಕದ ಕುರಿತು ಚರ್ಚಿಸುವ ಮೂಲಕ ಉದ್ಘಾಟಿಸಿದರು. ಎಸ್‍ಎಸ್‍ಎಲ್‍ಸಿ, ಪ್ಲಸ್‍ಟು, ಎಲ್‍ಎಸ್‍ಎಸ್, ಯುಎಸ್‍ಎಸ್ ವಿಜೇತರನ್ನು ಸನ್ಮಾನಿಸಲಾಯಿತು. ಮಕ್ಕಳು ತಮ್ಮ ಓದುವ ಅನುಭವವನ್ನು ಹಂಚಿಕೊಂಡರು. ಕೀರ್ತನಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿನಯಾ ಎಸ್. ಯಾದವ್ ಮಾತನಾಡಿದರು. ಅನಯಾ ಬಿ.ಸಿ. ವಂದಿಸಿದರು.




.jpg)
