ಇಸ್ಲಾಮಾಬಾದ್: ಕಾಶ್ಮೀರ ಮತ್ತು ಬಾಕಿ ಉಳಿದಿರುವ ಎಲ್ಲ ಸಮಸ್ಯೆಗಳ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲುಸಿದ್ಧ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರು ಶುಕ್ರವಾರ ತಿಳಿಸಿದ್ದಾರೆ.
ಮಾತುಕತೆ ಯಾವಾಗ ನಡೆದರೂ ಕಾಶ್ಮೀರ ಸಮಸ್ಯೆ ಮಾತ್ರವಲ್ಲದೆ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಡಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮರಳಿ ಪಡೆಯುವ ಮತ್ತು ಭಯೋತ್ಪಾದನೆ ವಿಚಾರವಾಗಿ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಕೇವಲ ಒಂದು ವಿಚಾರ ಅಥವಾ ಕಾರ್ಯಸೂಚಿ ಕುರಿತು ಭಾರತದೊಂದಿಗೆ ಪಾಕಿಸ್ತಾನ ಮಾತುಕತೆ ನಡೆಸುವುದಿಲ್ಲ ಎಂದು ಪಾಕಿಸ್ತಾನ ಪದೇ ಪದೇ ಹೇಳಿದೆ.




