ಪೆರ್ಲ: ಕರ್ಕಾಟಿಕ ಮಾಸದ ವಿಶೇಷ ಆಚರಣೆ'ಆಟಿದ ಕೂಟ'ಕಾರ್ಯಕ್ರಮ ಪೆರ್ಲದ ಶ್ರೀ ಶಾರದಾ ಮರಾಟಿ ಸೇವಾಸಂಘದ ಶ್ರೀ ಮಹಮ್ಮಾಯಿ ಸಭಾಂಗಣದಲ್ಲಿ ಜರುಗಿತು. ಪೆರ್ಲದ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ, ಶ್ರೀ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಶಾರದಾ ಮರಾಟಿ ಮಹಿಳಾ ವೇದಿಕೆ ಜಂಟಿ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಸಜಿಪ ಮೂಡ ಪದವಿಪೂರ್ವ ಕಾಲೇಜು ಉಪನ್ಯಾಸಕ ಬಾಲಕೃಷ್ಣ ನಾಯ್ಕ್ ಕೆ ಬೆಳ್ಳಾರೆ ಸಮಾರಂಭ ಉದ್ಘಾಟಿಸಿ ಆಟಿ ತಿಂಗಳ ಆಚಾರ- ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ಆಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು.
ಶಾರದಾ ಮರಾಟಿ ಚಾರಿಟೇಬಲ್ ಅಧ್ಯಕ್ಷ. ಬಿ ಜಿ.ನಾಯ್ಕ, ಮರಾಟಿ ಚಾರಿಟೇಬಲ್ ಟ್ರಸ್ಟಿನ ಮೆನೇಜಿಂಗ್ ಟ್ರಸ್ಟಿ ನಾರಾಯಣ ನಾಯ್ಕ್, ಮಂಗಳೂರು ಮಾರಾಟಿ ಸಂಘದ ಮಾಜಿ ಅಧ್ಯಕ್ಷ ರವಿ ಪ್ರಸಾದ್ ಕಯ್ಯಾರು, ಮಹಿಳಾ ವೇದಿಕೆಯ ಅಧ್ಯಕ್ಷೆ ವಾರಿಜಾ ಅಡ್ಯನಡ್ಕ ಆಷಾಡ ಮಾಸದ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಅಶ್ವಿತಾ ಜಾಲಕೊಟ್ಯ ಪ್ರಾರ್ಥನೆ ಹಾಡಿದರು. ಲಕ್ಷ್ಮಿ ಟೀಚರ್ ನಲ್ಕ ಎ ಸ್ವಾಗತಿಸಿದರು. ಶಿವ ನಾಯ್ಕ್ ವಂದಿಸಿದರು. ಹೇಮಾ ಜಾಲಕೊಟ್ಯ ಹಾಗೂ ತಂಡದವರು ಆಟಿ ತಿಂಗಳ ಆಚರಣೆಗೆ ಸಂಬಂದಿಸಿದ ನೃತ್ಯರೂಪಕ ಪ್ರಸ್ತುತಪಡಿಸಿದರು. ಸತೀಶ್ ಕುಮಾರ್ ಕಯ್ಯಾರು ಕಾರ್ಯಕ್ರಮದ ನಿರೂಪಿಸಿದರು. ಈ ಸಂದರ್ಭ ಸಂಘದ 7 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಆಟಿತಿಂಗಳಿನ ವಿಶೇಷ ತಿನಿಸುಗಳನ್ನು ಉಣಬಡಿಸಲಾಯಿತು.





