HEALTH TIPS

ಮಾರ್ಕಾಂಡೇಯ ಕಟ್ಜು 'ಕಣ್ಣು ಮಿಟುಕಿಸುವ' ಹೇಳಿಕೆಗೆ ತೀವ್ರ ಆಕ್ಷೇಪ

ನವದೆಹಲಿ: 'ಮಹಿಳಾ ವಕೀಲರು ನ್ಯಾಯಾಧೀಶರತ್ತ 'ಕಣ್ಣು ಮಿಟುಕಿಸುವ' ಮೂಲಕ ಅನುಕೂಲಕರ ನ್ಯಾಯಾಂಗ ಆದೇಶಗಳನ್ನು ಪಡೆಯಬಹುದು ಎಂಬ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಅವರ ಹೇಳಿಕೆಗೆ ಸುಪ್ರೀಂಕೋರ್ಟ್‌ನ ಮಹಿಳಾ ವಕೀಲರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

'ಕಟ್ಜು ಅವರ ಹೇಳಿಕೆಯು ಕಾನೂನು ವಲಯದಲ್ಲಿರುವ ಪ್ರತಿಯೊಬ್ಬ ಮಹಿಳೆಯ ಘನತೆ, ವಿಶ್ವಾಸಾರ್ಹತೆ, ಸಾಮರ್ಥ್ಯ, ಸಮಗ್ರತೆ ಮತ್ತು ವೃತ್ತಿಪರ ಸ್ಥಾನಮಾನದ ಮೇಲಿನ ದಾಳಿಯಾಗಿದೆ. ಇದಕ್ಕೆ ಅವರು ಸಾರ್ವಜನಿಕವಾಗಿ ಬೇಷರತ್ತಾಗಿ ಕ್ಷಮೆಯಾಚಿಸಬೇಕು' ಎಂದು ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಪವನಿ ಮತ್ತು ಕಾರ್ಯದರ್ಶಿ ಪ್ರೇರಣಾ ಸಿಂಗ್‌ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

'ಹಿಂದೊಮ್ಮೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ವ್ಯಕ್ತಿಯಿಂದ ಇಂತಹ ಹೇಳಿಕೆ ಬಂದಿರುವುದು ಅತ್ಯಂತ ಕಳವಳಕಾರಿ ಸಂಗತಿ. ಲಿಂಗ ತಾರತಮ್ಯದ ಈ ಹೇಳಿಕೆಯು ಮಹಿಳಾ ವಕೀಲರ ಕಠಿಣ ಪರಿಶ್ರಮ ಮತ್ತು ಅರ್ಹತೆಯನ್ನು ತುಚ್ಛವಾಗಿ ಕಾಣುತ್ತದೆ. ಅವರ ಹೇಳಿಕೆಯು ಮಹಿಳಾ ವಕೀಲರನ್ನು ಕೀಳಾಗಿ ಕಾಣುವುದು ಮಾತ್ರವಲ್ಲ, ನ್ಯಾಯ ವ್ಯವಸ್ಥೆಯ ನಿಷ್ಪಕ್ಷಪಾತತೆಯ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನೂ ಕುಗ್ಗಿಸುತ್ತದೆ. ಪ್ರಜಾಪ್ರಭುತ್ವದ ಆಶಯಗಳಿಗೂ ಇದು ಧಕ್ಕೆ ತರುತ್ತದೆ' ಎಂದು ಸಂಘ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries