HEALTH TIPS

ಕ್ಯಾನ್ಸರ್‌ ನಿಯಂತ್ರಣ: ಜಾಗತಿಕ ಗಮನ ಸೆಳೆದ ಕಣ್ಣಪುರಂ

ತಿರುವನಂತಪುರಂ: ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಕಣ್ಣೂರು ಜಿಲ್ಲೆಯ ಕಣ್ಣಪುರಂ ಗ್ರಾಮವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಕ್ಯಾನ್ಸರ್‌ ನಿಯಂತ್ರಣ ಕಾರ್ಯಕ್ರಮವಾದ 'ಕ್ಯಾನ್ಸರ್‌ ಮುಕ್ತ ಕಣ್ಣಪುರಂ' ಕುರಿತು 'ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾ ಜರ್ನಲ್‌'ನಲ್ಲಿ 'ಕಣ್ಣಪುರಂ ಮಾದರಿ' ಹೆಸರಿನಲ್ಲಿ ವರದಿ ಪ್ರಕಟಗೊಂಡಿದೆ.

ಕ್ಯಾನ್ಸರ್‌ ನಿಯಂತ್ರಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ವಿಧಾನದ ಅಧ್ಯಯನವನ್ನು ಈ ಜರ್ನಲ್‌ ಪ್ರಕಟಿಸುತ್ತದೆ.

ಈ ಕಾರ್ಯಕ್ರಮವು 2016ರಲ್ಲಿ ಆರಂಭವಾಗಿದ್ದು, ಗ್ರಾಮದ ಜನರಿಗೆ ಅದರಲ್ಲೂ ಮಹಿಳೆಯರಿಗೆ ಕಾಲಕಾಲಕ್ಕೆ ತಪಾಸಣೆ ನಡೆಸಿ ಆರಂಭದಲ್ಲೇ ರೋಗವನ್ನು ಪತ್ತೆಹಚ್ಚಲಾಗುತ್ತಿದೆ. ನೂರಾರು ಮಂದಿಯಲ್ಲಿ ಕ್ಯಾನ್ಸರ್‌ ಗುಣಪಡಿಸಲಾಗಿದೆ.

ಕಣ್ಣಪುರಂ ಪಂಚಾಯಿತಿ ಹಾಗೂ ಮಲಬಾರ್‌ ಕ್ಯಾನ್ಸರ್‌ ಕೇಂದ್ರ ಜಂಟಿಯಾಗಿ ಈ ಕಾರ್ಯಕ್ರಮವನ್ನು ಮುನ್ನಡೆಸುತ್ತಿವೆ. ಕ್ಯಾನ್ಸರ್‌ ಹಾಗೂ ಜೀವನಶೈಲಿಯ ಕಾರಣಕ್ಕೆ ಬರುವ ರೋಗಗಳ ತಪಾಸಣೆಯನ್ನು ಈಗ ರಾಜ್ಯದಾದ್ಯಂತ ಕೈಗೊಳ್ಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries